ಉಡುಪಿ, ಫೆ.12 (DaijiworldNews/HR): ಸಾರ್ವಜನಿಕ ದೂರಿನಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದು ಕೋಟೇಶ್ವರದಲ್ಲಿ 2 ಮಕ್ಕಳ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಕೋಡಿ ಬೀಚ್ ರಸ್ತೆಯ ಕಾಂಪ್ಲೆಕ್ಸ್ ಒಂದರಲ್ಲಿ ಬೀಜಾಪುರ ಮೂಲದ ಕುಟುಂಬವೊಂದು ತರಕಾರಿ ಅಂಗಡಿ ನಡೆಸುತ್ತಿದ್ದು ಅಲ್ಲಿ 14 ವರ್ಷದ ಶಾಲೆಯಿಂದ ಹೊರಗುಳಿದ ಬಾಲಕಿ ಹಾಗು 3 ವರ್ಷದ ಮಗು ಮಾತ್ರ ಅಂಗಡಿಯಲ್ಲಿ ಇದ್ದು ಅಂಗಡಿ ನೋಡಿಕೊಳ್ಳುತ್ತಿದ್ದು, ಬಾಲಕಿಯನ್ನು ವಿಚಾರಿಸಿದಾಗ ತಂದೆ ನಮ್ಮನ್ನು ಬಿಟ್ಟು ಹೋಗಿದ್ದು, ತಾಯಿ ಊರಿಗೆ ಹೋಗಿದ್ದಾರೆ ಎಂದು ತಿಳಿಸಿರುತ್ತಾರೆ .
ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 7ನೇ ತರಗತಿ ಕಲಿಯುತ್ತಿರುದಾಗಿ ತಿಳಿಸಿದ್ದು ಇತ್ತೀಚೆಗೆ ಶಾಲೆಗೇ ಹೋಗಿಲ್ಲ. ಒಟ್ಟಿನಲ್ಲಿ ಶಾಲೆಯಿಂದ ಹೊರಗುಳಿದ ಬಾಲಕಿಯಾಗಿದ್ದು ಪೋಷಕರ ಬೇಜವಾಬ್ಧಾರಿಯಿಂದ ಬಾಲಕಿಯ ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿದೆ. ಇನ್ನೊಂದು 3 ವರ್ಷದ ಬಾಲಕಿಯನ್ನು ತರಕಾರಿ ಬುಟ್ಟಿಯ ಮೇಲೆ ಮಲಗಿಸಿದ್ದರು.
ತಂದೆ ತಾಯಿ ಈ ಮಕ್ಕಳನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದ್ದು, ಮಕ್ಕಳನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು ಇಲ್ಲಿಗೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ ಕುಂದಾಪುರ, ಮಹೇಶ್ ದೇವಾಡಿಗ ಮತ್ತು ಕಪಿಲಾ ರಕ್ಷಾಣಾಧಿಕಾರಿ, ಅಂಬಿಕಾ ಆಪ್ತಸಮಾಲೋಚಕಿ, ಸುರಕ್ಷಾ ಸಮಾಜ ಕಾರ್ಯಕರ್ತೆ, ಸುನಂದಾ ಔಟ್ ರೀಚ್ ವರ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬೇಬಿ ಪೊಲೀಸ್ ಕುಂದಾಪುರ ಠಾಣೆ ಭಾಗವಹಿಸಿದ್ದರು.