ಮಂಗಳೂರು, ಫೆ. 12 (DaijiworldNews/SM): ನಗರದ ಕೊಟ್ಟಾರಲ್ಲಿ ಜನತೆಯ ಬಹು ದಿನದ ನಿರೀಕ್ಷೆಯ ಭಾರ್ಗವಿ ಬಿಲ್ಡರ್ಸ್ ಹಾಗೂ ನಿರ್ಮಾಣ್ ಹೋಮ್ಸ್ ಸಹಭಾಗಿತ್ವದ ಕೈಲಾಶ್ ವಸತಿ ಸಮುಚ್ಚಯಕ್ಕೆ ಫೆಬ್ರವರಿ 14ರಂದು ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ. ನ ಆಡಳಿತ ನಿರ್ದೇಶಕ ರವೀಂದ್ರ ಪೈ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ನಿರ್ಮಾಣ್ ಹೋಮ್ಸ್ ನ ಪಾಲುದಾರ ಗುರುದತ್ ಶೆಣೈ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ದೇರೆಬೈಲ್-ದಕ್ಷಿಣದ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ದೇರೆಬೈಲ್-ಪೂರ್ವದ ಕಾರ್ಪೊರೇಟರ್ ರಂಜಿನಿ ಎಲ್. ಕೋಟ್ಯಾನ್, ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಆಶಾಜ್ಯೋತಿ ರೈ, ಕೈಲಾಶ್ ವಸತಿ ಸಮುಚ್ಚಯದ ಬ್ರಾಂಡ್ ಅಂಬಾಸಡರ್ ಹಾಗೂ ತುಳು ಚಿತ್ರರಂಗದ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಿರ್ಮಾಣ್ ಹೋಮ್ಸ್ ಸಂಸ್ಥೆಯು "ಎಫರ್ಡೇಬಲ್ ಲಕ್ಶುರಿ" ಎಂಬ ಧ್ಯೇಯವನ್ನು ಹೊಂದಿದ್ದರೆ, ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು "ಹೈ ಲಿವಿಂಗ್ ಲಕ್ಶುರಿ ಹೋಮ್ಸ್" ಅನ್ನು ಕೈಗೆಟುಕುವ ಬೆಲೆಯಲ್ಲಿ ಜನತೆಗೆ ನೀಡುವ ಧ್ಯೇಯವನ್ನು ಹೊಂದಿದೆ. ಭಾರ್ಗವಿ ಬಿಲ್ಡರ್ಸ್ ಮಂಗಳೂರಿನ ಜನತೆಯ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ ಟು ಬಿ ಹೆಚ್ ಕೆ ಮನೆಯನ್ನು 50 ಲಕ್ಷದೊಳಗೆ ಪರಿಚಯಿಸುತ್ತಿದೆ.
ಈ ಅಪಾರ್ಟ್ಮೆಂಟ್ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಲಭ್ಯವಾಗಲಿವೆ. ಅಪಾರ್ಟ್ಮೆಂಟ್ನ ವಿಶೇಷತೆಯೆಂದರೆ ಈ ಕಟ್ಟಡದ ತುದಿಯಲ್ಲಿ ಈಜು ಕೊಳವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಉತ್ತಮ ಹೆಸರು ಪಡೆದಿರುವ ಈ ಸಂಸ್ಥೆ 15 ಅಂತಸ್ತುಗಳನ್ನೊಳಗೊಂಡ 131 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ.
ಪ್ರೀಲಾಂಚ್ ಆಫರ್ ಆಗಿ ಟು ಬಿ ಹೆಚ್ ಕೆ ಫ್ಲ್ಯಾಟ್ ಕೇವಲ 50 ಲಕ್ಷ ರೂಪಾಯಿಯೊಳಗೆ ಎಲ್ಲ್ಲಾ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ.