ಕಾಸರಗೋಡು, ಫೆ.13 (DaijiworldNews/HR): ಕೃಷಿ ವಲಯಕ್ಕೆ ಹೆಚ್ಚು ಉತ್ತೇಜನ ನೀಡುವ ಕಾಸರಗೋಡು ಜಿಲ್ಲಾ ಪಂಚಾಯತ್ನ 2021-22ನೇ ಸಾಲಿನ ಮುಂಗಡ ಪತ್ರವನ್ನು ಉಪಾಧ್ಯಕ್ಷ ಶಾನ್ವಾಝ್ ಪಾದೂರು ಶುಕ್ರವಾರ ಮಂಡಿಸಿದ್ದಾರೆ.



ಪೆರಿಯದಲ್ಲಿ ಕೃಷಿ ಸಗಟು ಮಾರುಕಟ್ಟೆ ಸ್ಥಾಪನೆಗೆ ಒತ್ತು ನೀಡಲಾಗಿದೆ, ರೈತರ ಫಸಲಿಗೆ ಸೂಕ್ತ ಬೆಂಬಲ ಬೆಲೆ ಖಾತರಿಪಡಿಸಲಾಗುವುದು, ಎಲ್ಲಾ ವಲಯಗಳಲ್ಲಿ ಜನರಿಗೆ ಉತ್ತಮ ಸೇವೆ ಲಭಿಸಲು ಜಿಲ್ಲೆಯನ್ನು ಸೇವಾ ಸ್ನೇಹಿ ಜಿಲ್ಲೆ ಯನ್ನಾಗಿ ಪರಿ ವರ್ತಿಸಲಾಗುವುದು, ಹೈನು ಗರಿಕೆಗೆ ಹೆಚ್ಚು ಒತ್ತು ನೀಡಲಾಗುವುದು, ಈ ಮೂಲಕ ದಿನವೊಂದಕ್ಕೆ 75 ಸಾವಿರ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ, ನೀರಿನ ಕೊರತೆ ನೀಗಿಸಲು ಜಲ ಬಜೆಟ್ ತಯಾರಿಸಲಾಗುವುದು, ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಬಾವಿಗಳನ್ನು ರೀ ಚಾರ್ಜಿಂಗ್ ಯೋಜನೆಯಲ್ಲಿ ಅಳವಡಿಸಲಾಗುವುದು, ಮೀನು ಕೃಷಿಗೂ ಒತ್ತು ನೀಡಲಾಗಿದೆ, ಆರಿಕ್ಕಾಡಿ ಕಡವತ್ನಲ್ಲಿ ಫಿಶ್ ಲ್ಯಾಡಿಂಗ್ ಕೇಂದ್ರ ಸ್ಥಾಪಿಸಲಾಗುವುದು, ಕೊಯಿಪ್ಪಾಡಿ ಕಡವತ್ ಬಲೆ ನವೀಕರಣ ಕೇಂದ್ರ ಸ್ಥಾಪನೆಗೂ ಯೋಜನೆ ತಯಾರಿಸಲಾಗಿದೆ, ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಿಸಲಾಗುವುದು, ಡಯಾಲಿಸಿಸ್ ಸೌಲಭ್ಯವನ್ನು ಹೆಚ್ಚಿಸಲಾಗುವುದು, ವಿವಿಧ ವಲಯಗಳಲ್ಲಿ ಗಮನ ಸೆಳೆದ ಮಹಿಳೆಯರನ್ನು ಗುರುತಿಸಿ ತರಬೇತಿ ನೀಡುವ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಒಂದು ಸಾವಿರ ಮಹಿಳೆಯರನ್ನು ಪದವೀಧರ ದನ್ನಾಗಿಸುವ ಅಭಿಯಾನ ಆರಂಭಿಸಲಾಗಿದೆ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಸ್ವ ಉದ್ಯೋಗ ಘಟಕ ಆರಂಭಿಸಲು ತೀರ್ಮಾನಿಸಲಾಗಿದೆ, ಪೆರಿಯದಲ್ಲಿ ಸ್ಥಾಪಿಸುವ ವ್ಯಾಪಾರ ಮಾರುಕಟ್ಟೆ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಕ್ರಮ ತೆಗೆದು ಕೊಳ್ಳಲಾಗುವುದು, ಪ್ಲಸ್ ಟು ಸಮತ್ವ ಶಿಕ್ಷಣದಲ್ಲಿ ಕನ್ನಡಿಗರನ್ನು ಸೇರಿಸುವ ಕುರಿತು ತೀರ್ಮಾನಿಸಲಾಗಿದೆ.
ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.