ಮಂಜೇಶ್ವರ, ಫೆ.13 (DaijiworldNews/PY): ಮಂಜೇಶ್ವರ ಲೋಕೋಪಯೋಗಿ ಅತಿಥಿಗೃಹದ ನೂತನ ಬ್ಲಾಕ್ ಕಟ್ಟಡದ ಉದ್ಘಾಟನೆಯನ್ನು ಫೆ.12ರ ಶುಕ್ರವಾರ ಆನ್ ಲೈನ್ ಮೂಲಕ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಉದ್ಘಾಟಿಸಿದರು.




ಈ ಸಂದರ್ಭದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿರುವ 155 ಲೋಕೋಪಯೋಗಿ ಅತಿಥಿಗೃಹಗಳಲ್ಲಿ 25 ಗೃಹಗಳು ಈ ಸರಕಾರದ ಅವಧಿಯಲ್ಲಿ ಪೂರ್ಣಗೊಂಡಿವೆ" ಎಂದರು.
ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಷಂಸೀನಾ ಟೀಚರ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್, ರಾಜಕೀಯ ಪಕ್ಷದ ಮುಖಂಡರಾದ ಕೆ.ಆರ್.ಜಯಾನಂದ, ಅಬ್ದುಲ್ ಹಮೀದ್, ಹಮೀದ್ ಮಚ್ಛಂಪಾಡಿ, ನವೀನ್ ಕುಮಾರ್, ತಾಜುದ್ದೀನ್, ಕೆ.ಎ.ಖಾದರ್, ರಾಘವ ಚೇರಾಲ್, ಮನೋಜ್ ಕುಮಾರ್, ಸಿದ್ದಿಕ್ ಅಲಿ ಮೊಗ್ರಾಲ್ ಮೊದಲಾದವರು ಉಪಸ್ಥಿತರಿದ್ದರು.
ಲೋಕೋಪಯೋಗಿ ಕಟ್ಟಡ ವಿಭಾಗ ಸಹಾಯಕ ಇಂಜಿನಿಯರ್ ಯು.ಕೆ. ರವಿಕುಮಾರ್ ವರದಿ ಮುಂದಿಟ್ಟರು .
ಇಂಜಿನಿಯರ್ ವಿ.ಪಿ ಮುಹಮ್ಮದ್ ಮುನೀರ್ ಸ್ವಾಗತಿಸಿ, ಅನಾಸ್ ಅಶ್ರಫ್ ವಂದಿಸಿದರು.