ಕಾರ್ಕಳ, ಜು 12: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದು ಮನೆಯ ಸಾಕುಕೋಳಿಗಳನ್ನು ಭಕ್ಷಿಸಿ ನಾಗರಿಕರಿಗೆ ಆತಂಕವನ್ನು ಉಂಟುಮಾಡಿದ್ದ ಕಾಳಿಂಗ ಸರ್ಪವನ್ನು ಕಾರ್ಕಳದಲ್ಲಿ ಉರಗ ಪ್ರಿಯ ಅನಿಲ್ ಪ್ರಭು ಸೆರೆ ಹಿಡಿದಿದ್ದಾರೆ.
ದಿನಗಳ ಹಿಂದೆ ಕಾರ್ಕಳದ ಕಡ್ತಲ ಗ್ರಾಮ ಪಂಚಾಯತ್ ಸಮೀಪದ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಕೊಳಿಯನ್ನು ತಿಂದು ಹೋಗಿದ್ದ ಕಾಳಿಂಗಸರ್ಪ ಮತ್ತೆ ಇಂದು ಬೆಳಿಗ್ಗೆ ಅಗಮಿಸಿ ಮತ್ತೊಂದು ಕೋಳಿಯನ್ನು ಭಕ್ಷಿಸಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮಾತ್ರವಲ್ಲದೇ ಕೆಲ ದಿನಗಳಿಂದ ಈ ಕಾಳಿಂಗ ಪರಿಸರದಲ್ಲಿ ತಿರುಗುತ್ತಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಆತಂಕಗೊಂಡ ನಾಗರಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖಾಧಿಕಾರಿಯ ಕೋರಿಕೆಯಂತೆ ಘಟನಾ ಸ್ಥಳಕ್ಕೆ ತೆರಳಿದ ಅನಿಲ್ ಪ್ರಭು, 18 ಅಡಿ ಉದ್ದದ ಹಾಗೂ 40 ಕೆ.ಜಿ ತೂಕದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಬಳಿಕ ಕುದುರೆಮುಖ ರಕ್ಷಿತಾರಣ್ಯ ಪ್ರದೇಶಕ್ಕೆ ಅದನ್ನು ಬಿಡಲಾಗಿದೆ.