ಕಾಸರಗೋಡು, ಫೆ.13 (DaijiworldNews/PY): ಕಾಸರಗೋಡು ಎಸ್ಪಿಯನ್ನು ಮತ್ತೆ ವರ್ಗಾವಣೆ ಮಾಡಲಾಗಿದ್ದು, ಕಾಸರಗೋಡು ಎಸ್ಪಿಯಾಗಿ ವಾರಗಳ ಹಿಂದೆಯಷ್ಟೇ ಹರಿಶಂಕರ್ ಅವರನ್ನು ನೇಮಿಸಲಾಗಿತ್ತು. ಆದರೆ ಅವರ ನೇಮಕವನ್ನು ರದ್ದುಗೊಳಿಸಿ ಇದೀಗ ಪಿ.ಬಿ ರಾಜೀವ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಪತ್ತನಂತ್ತಿಟ್ಟ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜೀವ್ ಅವರನ್ನು ಕಾಸರಗೋಡಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಿ.ಶಿಲ್ಪಾ ಅವರನ್ನು ಕೋಟಯಂಗೆ ವರ್ಗಾವಣೆ ಮಾಡಿ, ಹರಿಶಂಕರ್ ಅವರನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.