ಮಂಗಳೂರು, ಫೆ.13 (DaijiworldNews/MB) : ಮೀನು ಡಿಕ್ಕಿ ಹೊಡೆದು ಬೋಟ್ ಹಾನಿಗೀಡಾಗಿರುವ ಘಟನೆ ಆಳಸಮುದ್ರ ಮೀನುಗಾರಿಕೆ ವೇಳೆ ನಡೆದಿದೆ.

ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ತುಳುವಿನಲ್ಲಿ ಮಡಲ್ ಮೀನ್ ಎಂದು ಕರೆಯಲ್ಪಡುವ ಮೀನು ಬೋಟಿಗೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಚೂಪಾಗಿ ಇರುವ ಬಾಯಿ ಮುರಿದು ಮೀನಿನಲ್ಲಿ ರಕ್ತಸ್ರಾವ ಉಂಟಾಗಿದೆ. ಆದರೆ ಮೀನು ಗುದ್ದಿದ ಪರಿಣಾಮಕ್ಕೆ ಮೀನುಗಾರಿಕಾ ದೋಣಿಯೂ ಹಾನಿಗೀಡಾಗಿದೆ. ಇಂದು ನಸುಕಿನ 3.32 ರ ಹೊತ್ತಿಗೆ ಮಾಡಲಾಗಿದೆ ಎನ್ನಲಾದ ವಿಡಿಯೋ ಇದೀಗ ವೈರಲ್ ಆಗಿದೆ.