ಮಂಗಳೂರು, ಫೆ.13 (DaijiworldNews/MB) : ರಾಜ್ಯ ಸರ್ಕಾರವು ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತ್ ಸಿಇಒ ಡಾ. ಆರ್ ಸೆಲ್ವಮಣಿ ಸೇರಿದಂತೆ ಒಟ್ಟು ಒಂಬತ್ತು ಜಿಲ್ಲೆಯ 42 ಐಎಎಸ್ ಅಧಿಕಾರಿಗಳನ್ನು ಧಿಡೀರ್ ವರ್ಗಾವಣೆ ಮಾಡಿದೆ. ಈ ಆದೇಶವು ಈ ಕೂಡಲೇ ಜಾರಿಗೆ ಬರಲಿದೆ.

2018 ರಲ್ಲಿ ಡಾ. ಎಂ. ಆರ್ ರವಿ ಅವರು ವರ್ಗಾವಣೆಗೊಂಡಾಗ ದಕ್ಷಿಣ ಕನ್ನಡ ಜಿಲ್ಲಾ ಸಿಇಒ ಆಗಿ ಸೆಲ್ವಮಣಿಯವರು ಅಧಿಕಾರ ಸ್ವೀಕರಿಸಿದ್ದರು.
ಪ್ರಸ್ತುತ ಅವರು ಕೋಲಾರದ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸಿಇಒ ಆಗಿ ನೇಮಕಗೊಂಡಿದ್ದಾರೆ.