ಉಳ್ಳಾಲ, ಫೆ.13 (DaijiworldNews/MB) : ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೆ.ಸಿ. ರೋಡಿನಲ್ಲಿ ಇಂದು ಮದ್ಯಾಹ್ನ ವೇಳೆ ಸಂಭವಿಸಿದೆ.

ಪಿಲಿಕೂರ್ ಮಲ್ಲಿಕಟ್ಟೆ ನಿವಾಸಿ ಅಬ್ದುಲ್ ಕರೀಂ ಮೃತ ವ್ಯಕ್ತಿ.
ಮಧ್ಯಾಹ್ನ ಕೆ. ಸಿ. ರೋಡಿನಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಕರೀಂ ಅವರನ್ನು ಕೆ. ಎಸ್. ಹೆಗಡೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.