ಮಂಗಳೂರು, ಫೆ.13 (DaijiworldNews/MB) : ಮಂಗಳೂರು ನಗರದ ಇಕೋನಾಮಿಕ್ ಹಾಗೂ ನಾರ್ಕೊಟಿಸ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಕಾರ್ಯಚರಣೆಯಲ್ಲಿ ನಗರದ ಕೆಎಸ್ಆರ್ಟಿಸಿ ಬಳಿಕ ಮೆಡಿಕಲ್ ಕಾಲೇಜೊಂದರ ಬಳಿಯಲ್ಲಿ ಕೊಕೈನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂದಿತ ಆರೋಪಿಯನ್ನು ನಗರದ ಮಾರುಗುಡಿ ದೇವಸ್ಥಾನ ಸಮೀಪದ ನಿವಾಸಿ ಸುಪ್ರೀತ್ (35) ಎಂದು ಗುರುತಿಸಲಾಗಿದೆ.
ಬಂಧಿತನಿಂದ 2 ಲಕ್ಷ ಮೌಲ್ಯದ ಸುಮಾರು 21.13 ಗ್ರಾಂ ತೂಕದ ಕೊಕೈನ್, 35 ಸಾವಿರ ಮೌಲ್ಯದ ಎಡರು ಮೊಬೈಲ್ ಫೋನು, 2ಸಾವಿರ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಸ್ವಾದೀನಕ್ಕೆ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 2,37,000 ಆಗಿದೆ.
ಇಕೋನಾಮಿಕ್ ಹಾಗೂ ನಾರ್ಕೊಟಿಸ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಮಕೃಷ್ಣ ಕೆ.ಕೆ. ಮತ್ತು ಸಿಬ್ಬಂದಿಯವರು ಈ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.