ಕಾಸರಗೋಡು, ಫೆ.13 (DaijiworldNews/MB) : ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಅಭಿವೃದ್ಧಿ ಮುನ್ನಡೆ ಯಾತ್ರೆ ಇಂದು ಸಂಜೆ ಉಪ್ಪಳದಿಂದ ಪ್ರಯಾಣ ಬೆಳೆಸಿತು. ಉಪ್ಪಳದಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯಾತ್ರೆಗೆ ಚಾಲನೆ ನೀಡಿದರು.







ಎಲ್ಡಿ ಎಫ್ ಸಂಚಾಲಕ ಎ.ವಿಜಯರಾಘವನ್ ನೇತೃತ್ವದ ಯಾತ್ರೆ ಉತ್ತರ ಕೇರಳದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿದ್ದು, 26 ರಂದು ತೃಶ್ಯೂರಿನಲ್ಲಿ ಕೊನೆಗೊಳ್ಳಲಿದೆ.
ಸಮಾರಂಭದಲ್ಲಿ ರಾಜ್ಯದ ಸಚಿವರಾದ ಎಂ. ವಿ ಜಯರಾಜನ್, ಕಡನ್ನ ಪಳ್ಳಿ ರಾಮಚಂದ್ರನ್, ಇ . ಚಂದ್ರಶೇಖರನ್ , ಮಾಜಿ ಸಂಸದ ಪಿ . ಕರುಣಾಕರನ್, ಶಾಸಕ ಕೆ . ಕು೦ಞ ರಾಮನ್ ಮೊದಲವರು ಉಪಸ್ಥಿತರಿದ್ದರು.