ಮಂಗಳೂರು, ಜು 12: ನಗರದ ಹೊರವಲಯದ ವಾಮಂಜೂರಿನ ಕೆತ್ತಿಕಲ್ ನಿಂದ ಬೊಂಡಂತಿಲ ಸಂಪರ್ಕದ ರಸ್ತೆ ಬಿರುಕು ಬಿಟ್ಟಿದೆ. ಈ ಪರಿಸರದಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ದ್ವಿಚಕ್ರ ಸವಾರರಿಗೆ ಆತಂಕ ಶುರುವಾಗಿದೆ.
ಲಕ್ಷಾಂತರ ರೂಪಾಯಿಗಳನ್ನು ಸುರಿದು ನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಬಿರುಕು ಬಿಟ್ಟಿರುವುದು ಕಾಮಗಾರಿ ಕಳಪೆಯಾಗಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ರಸ್ತೆ ಬಿರುಕು ಕಂಡು ಸ್ಥಳೀಯರ ಜನರು ಗಾಬರಿಯಾಗಿದ್ದಾರೆ.