ಬಂಟ್ವಾಳ, ಫೆ.14 (DaijiworldNews/PY): ತನ್ನ ನಿಷ್ಠಾವಂತ, ಕ್ರಿಯಾಶೀಲ ಕರ್ತವ್ಯಕ್ಕೆ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರನ್ನು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಹಾಗೂ ಕಥೋಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ವತಿಯಿಂದ ಫೆ.13ರ ಶನಿವಾರ ಸಂಜೆ ಬಂಟ್ವಾಳ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಶಾಲು, ಫಲಪುಷ್ಪ ನೀಡಿ ಅಭಿನಂದಿಸಲಾಯಿತು.

ಸನ್ಮಾನ ನೆರವೇರಿಸಿದ ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಮಾತನಾಡಿ, "ನಾಗರಾಜ್ ಅವರ ಪ್ರಾಮಾಣಿಕ ಸೇವೆ ಇನ್ನೂ ಹೆಚ್ಚುಕಾಲ ಸಾರ್ವಜನಿಕರಿಗೆ ದೊರೆಯಲಿ" ಎಂದು ಹಾರೈಸಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಥೋಲಿಕ್ ಸಭಾದ ಅಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟೀಸ್, ಕಾರ್ಯದರ್ಶಿ ಶಿಕ್ಷಕಿ ಐಡಾ ಲಸ್ರಾದೊ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ, ಸಮಿತಿಯ ಸಂಯೋಜಕರಾದ ಸ್ಟೀವನ್ ಆಲ್ವಿನ್ ಪಾಯಸ್, ಸಂಚಾಲಕರಾದ ಅನಿತಾ ಮಾರ್ಟಿಸ್, ಕಥೋಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಸ್ಥಾಪಕಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್, ಖಜಾಂಚಿ ಕಿಶೋರ್ ಸಂತೋಷ್ ಪಿಂಟೋ ಉಪಸ್ಥಿತರಿದ್ದರು.