ಉಡುಪಿ, ಫೆ.14 (DaijiworldNews/PY): ಫೆ.13ರ ಶನಿವಾರದಂದು ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಜಂಕ್ಷನ್ನಿಂದ ಬಲೈಪಾದೆವರೆಗೆ ಹಾಗೂ ಕರಾವಳಿ ಜಂಕ್ಷನ್ನಿಂದ ಸಂತೆಕಟ್ಟೆಯವರೆಗೆ ರಾಷ್ಟ್ರೀಯ ಹೆದ್ದಾರಿಯ ಹೆದ್ದಾರಿ 66ರ ಎರಡು ಬದಿಯ ಸ್ಚಚ್ಚತಾ ಅಭಿಯಾನನ್ನು ಉಡುಪಿ ನಗರಸಭೆ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉದ್ಘಾಟಿಸಿ ಸ್ವಚ್ಚ ಸುಂದರ ಉಡುಪಿಯನ್ನಾಗಿಸಿಲು ಕರೆ ನೀಡಿದ್ದಾರೆ.






ನಗರಸಭೆಯ ಅಧ್ಯಕ್ಷೆ ಸುಮಿತ್ರ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷಗಿರೀಶ್ ಎಂ ಅಂಚನ್, ನಗರಸಭೆಯ ಸದಸ್ಯರು, ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತಮೋಹನ್ ರಾಜು, ಪರಿಸರ ಅಭಿಯಂತ ಸ್ನೇಹ ಕೆ.ಎಸ್ ಹಾಗೂ ಎಲ್ಲಾ ನಗರಸಭೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಪಾಲ್ಗೊಂಡಿದ್ದರು ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.