ಮಂಗಳೂರು, ಫೆ.14 (DaijiworldNews/PY): ಗ್ರಾ.ಪಂ ಅಧ್ಯಕ್ಷೆಯಾಗಿ ಚುನಾಯಿತಗೊಂಡ ಮಹಿಳೆಯೋರ್ವರು ಅಧ್ಯಕ್ಷೆಯಾಗಿ ಆಯ್ಕೆಗೊಂಡ ಒಂದು ದಿನದ ಬಳಿಕ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.


ಫೆ.12ರ ಶುಕ್ರವಾರದಂದು ಅಂಬ್ಲಮೊಗರು ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಲತಾ ಪರಮೇಶ್ವರ್ ಹಾಗೂ ಉಪಾಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಆಯ್ಕೆಯಾಗಿದ್ದಾರೆ.
ಗರ್ಭೀಣಿಯಾಗಿದ್ದ ಲತಾ ಪರಮೇಶ್ವರ್ ಅವರಿಗೆ ಫೆ.20ರಂದು ಹೆರಿಗೆ ದಿನಾಂಕ ನಿಗದಿಯಾಗಿದ್ದು, ಲತಾ ಅವರು ಅಧಿಕಾರ ವಹಿಸಿಕೊಂಡ ಮಾರನೇ ದಿನ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.