ಮಂಗಳೂರು, ಫೆ.15 (DaijiworldNews/PY): ಮಂಗಳೂರಿನ ಪಾಲ್ದನೆಯಲ್ಲಿರುವ ಸಂತ ತೆರೆಜಾ ಚರ್ಚಿನ ಸಂತ ಸೆಬಾಸ್ಟಿಯನ್ ವಾರ್ಡಿನ ವಾರ್ಡ್ ದಿನಾಚರಣೆಯನ್ನು ವಾರ್ಡಿನ ಸದಸ್ಯ ರೋಶನ್ ಸೈಮನ್ ಡಿಸೋಜಾ ಅವರ ತೆರೆದ ಮೈದಾನದಲ್ಲಿ ಆಚರಿಸಲಾಯಿತು.













ವಾರ್ಡಿನ ಮುಖ್ಯಸ್ಥ ಸೆಲಿನ್ ಡಿ’ಸೋಜಾ ಅವರು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಬಂದ ಮಂಗಳೂರಿನ ಧರ್ಮಪ್ರಾಂತ್ಯದ ಜ್ಯುಡಿಷಿಯ ವಿಕಾರ್ ವಂದನೀಯ ಫಾ.ವಾಲ್ಟರ್ ಡಿ’ಮೆಲ್ಲೊ ಅವರು ವಾರ್ಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಏಕತೆಯನ್ನು ಶ್ಲಾಘಿಸಿದರು.
ವಾರ್ಡಿನ ಸದಸ್ಯರಿಂದ ವಿವಿಧ ವಿನೋದಾವಳಿಗಳು, ವಿವಿಧ ಆಟಗಳು ನಡೆದವು.
ಈ ಸಂದರ್ಭದಲ್ಲಿ ವಾರ್ಡಿನ ವರದಿಯನ್ನು ಸಿಂತಿಯಾ ಟೈಲ್ಲಿಸ್ ವಾಚಿಸಿದರು. ಚರ್ಚಿನ ಉಪಾಧ್ಯಕ್ಷ ವಿಲಿಯಂ ಲೋಬೊ, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಅವರು ಉಪಸ್ಥಿತರಿದ್ದರು. ವಾರ್ಡಿನ ಪ್ರತಿನಿಧಿ ವಾಲ್ಟರ್ ಡಿ’ಕುನ್ಹಾ ಅವರು ವಂದಿಸಿದರು.