ಕಾಸರಗೋಡು, ಫೆ.15 (DaijiworldNews/HR): ದೇಹದ ಮೇಲೆ ಗೋಡೆಯ ಕಲ್ಲು ಬಿದ್ದ ಪರಿಣಾಮ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಸಮೀಪದ ಚಾಯೋತ್ನಲ್ಲಿ ನಡೆದಿದೆ.

ಚಾಯೋತ್ ಚೆಕ್ಲಿಯ ಕಾಲನಿಯ ರಮೇಶ್ ಎಂಬವರ ಪುತ್ರ ರಿತಿನ್ (12) ಮೃತಪಟ್ಟ ಬಾಲಕ.
ಆಟವಾಡುತ್ತಿದ್ದ ಬಾಲಕ ಆವರಣ ಗೋಡೆಯ ಮೇಲೆ ಹತ್ತುತ್ತಿದ್ದಾಗ ಕಲ್ಲು ದೇಹದ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ನೀಲೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಸ್ಥಿತಿ ಗಂಭೀರವಾದುದರಿಂದ ಕಣ್ಣೂರು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಬಾಲಕ
ಮೃತಪಟ್ಟಿದ್ದಾನೆ.
ರಿತಿನ್ ಚಾಯೋತ್ ಸರಕಾರಿ ಹಯರ್ ಸೆಕಂಡರಿ ಶಾಲಾ ಐದನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.