ಉಡುಪಿ, ಫೆ.15 (DaijiworldNews/HR): ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೌಕರರ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್) ಸೌಲಭ್ಯಗಳನ್ನು ಪುನರಾರಂಭಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಪ್ರಕಟಿಸಿದ್ದಾರೆ.

ಆದ್ದರಿಂದ ಈಗ ಎಲ್ಲಾ ಸೂಪರ್-ಸ್ಪೆಷಾಲಿಟಿ ಮತ್ತು ಜನರಲ್ ಸ್ಪೆಷಾಲಿಟಿ (ನೌಕರರ ರಾಜ್ಯ ವಿಮಾ ಯೋಜನೆ) ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿದೆ.
ಡಾ.ಅವಿನಾಶ್ ಶೆಟ್ಟಿ ಇಎಸ್ಐ ಫಲಾನುಭವಿಗಳಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.