ಉಡುಪಿ,ಫೆ.16 (DaijiworldNews/HR): ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ.ಧನಲಕ್ಷ್ಮಿ ಹೆಚ್. ಆರ್ (37) ಅವರ ಲಕ್ಷ್ಮಣ್ ಶೇಟ್ ಕಂಪೌಂಡ್ನಲ್ಲಿರುವ ಬಾಡಿಗೆ ಮನೆ ಕಳ್ಳರು ನುಗ್ಗಿ ನಗದು ಮತ್ತು ಚಿನ್ನಾಭರಣಗಳನ್ನು ಕಳವುಗೈದ ಘಟನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಫೆಬ್ರವರಿ 12 ರಂದು ರಾತ್ರಿ 9 ಗಂಟೆಗೆ ವೈದ್ಯರು ಮೈಸೂರಿಗೆ ಹೋಗಿದ್ದು, ಫೆಬ್ರವರಿ 15 ರಂದು ಬೆಳಿಗ್ಗೆ 5.45 ಕ್ಕೆ ಹಿಂದಿರುಗುವಾಗ ಅವರು ಮನೆಯ ಮುಂಭಾಗದ ಬಾಗಿಲಿನ ಬೀಗ ಒಡೆದಿದ್ದು ಬಾಗಿಲು ತೆರೆದಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿದ್ದ 29 ಗ್ರಾಂ ತೂಕದ 1,16,000 ಮೌಲ್ಯದ ಮಾಂಗಲ್ಯ ಸರ ಮತ್ತು ಕಿವಿಯೋಲೆ ಮತ್ತು 25,000 ರೂ ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 454, 457 ಮತ್ತು 380 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.