ಮಂಗಳೂರು, ಜು13: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ 697 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಕಾಸರಗೋಡಿನ ನಿವಾಸಿ ಮೋಸಿನ್ ಅಬೂಬಕ್ಕರ್ ಬಂಧಿತ ಆರೋಪಿ.
ಈತ ಶುಕ್ರವಾರ ದುಬೈಯಿಂದ ಏರ್ ಇಂಡಿಯಾ IX 814 ವಿಮಾನ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಪ್ರಯಾಣಿಕರ ಲಗೇಜು ತಪಾಸಣೆ ಸಂದರ್ಭ ಮೋಸಿನ್ ಅಬೂಬಕ್ಕರ್ ಬ್ಯಾಗ್ನಲ್ಲಿ ಸಿಡಿ ರೇಡಿಯೊ ಮತ್ತು ಸಲಾಡ್ ಮೇಕರ್ ಮೆಷಿನ್ ಪತ್ತೆಯಾಗಿದೆ. ಇದರ ಒಳಗಡೆ ಚಿನ್ನ ಇಟ್ಟಿರುವುದು ಗಮನಕ್ಕೆ ಬಂದಿದೆ.
ಇದು ಶುದ್ಧ ಚಿನ್ನವಾಗಿದ್ದು, ಕೂಡಲೇ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.