ಮಂಗಳೂರು, ಫೆ.16 (DaijiworldNews/MB) : ಮಲಯಾಳಂ ನ್ಯೂಸ್ ಖ್ಯಾತಿಯ "ಮೀಡಿಯಾ ಒನ್" ಚಾನೆಲ್ ನಡೆಸಿದ ಸಮೀಕ್ಷೆಯಲ್ಲಿ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸೇವೆಯನ್ನು ಗುರುತಿಸಿ ವಿಶೇಷವಾಗಿ ಕೊರೊನದ ಭೀತಿಯಲ್ಲಿ ತತ್ತರಿಸಿದ ಸಮಯದಲ್ಲಿ ಜುಬೈಲ್ ನಗರದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗಾಗಿ ಎಲ್ಲಾ ರೀತಿಯ ಮಾನವೀಯ ಸೇವೆ ಒದಗಿಸಿದ ಸಂಘಟನೆಗಳಲ್ಲಿ ಒಂದಾಗಿದೆ "ಕ್ರೈಸಿಸ್ ಮ್ಯಾನೇಜ್ಮೆಂಟ್ ಟೀಮ್ ಜುಬೈಲ್".

ಹಲವು ಸನ್ನಿವೇಶಗಳಲ್ಲಿ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಚಿರಪರಿಚಿತ ಹೆಸರು ಇಮ್ರಾನ್ ಜುಬೈಲ್.
ಮೂಲತಃ ಮಂಗಳೂರಿನ ಕೃಷ್ಣಾಪುರದ ನಿವಾಸಿಯಾದ ಇವರು, ತಮ್ಮ ಬಿಸಿನೆಸ್ ಮ್ಯಾನೇಜ್ಮೆಂಟ್ ಪದವಿಯನ್ನು ಮುಗಿಸಿ, ವಿದೇಶಕ್ಕೆ ಪ್ರಯಾಣ ಮಾಡಿ ಹಲವು ಹುದ್ದೆಗಳನ್ನು ನಡೆಸಿ, ತನ್ನ ಸಂಸ್ಥೆಯ ಉನ್ನತ ಹುದ್ದೆಯ ನಿರತ ಸಮಯದಲ್ಲಿ ಕಾರ್ಯನಿರತರಾಗಿ ಅದರ ಜೊತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಭಾರತೀಯರ ಸೇವೆ ಮಾಡಿ, ಅವರ ಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಕಂಡುಹಿಡಿದು ಸಾಂತ್ವನಿಸುವ ಮನೋಭಾವ, ಇಂತಹ ವ್ಯಕ್ತಿತ್ವ ಹೊಂದಿರುವ ಇನ್ನಿತರ ಸಮಾಜ ಸೇವಕರ ಜೊತೆ ಸೇರಿಕೊಂಡು ಕೊರೊನಾ ಭೀತಿಯ ನಡುವೆ ಸೌದಿ ಅರೇಬಿಯಾಯದಲ್ಲಿ ನಡೆಸಿದ ಸಮಾಜ ಸೇವೆಯನ್ನು ಕೇರಳದ ಪ್ರಸಿದ್ಧ ಚಾನೆಲ್ ಇವರ ಸೇವೆಯನ್ನು ಪ್ರಶಂಸಿಸಿ ಪ್ರಸ್ತಿಯನ್ನು ಘೋಷಿಸಿರುವುದು ಶ್ಲಾಘನೀಯ.