ಕಾಸರಗೋಡು, ಫೆ.16 (DaijiworldNews/MB) : ಕಂಟೈನರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆಕಾಞಂಗಾಡ್ ಚಿತ್ತಾರಿಯಲ್ಲಿ ನಡೆದಿದೆ. ನಿಲ್ಲಿಸದೆ ಪರಾರಿಯಾದ ಲಾರಿಯನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತಪಟ್ಟವರನ್ನು ಬೇಕಲ ಕಡಪ್ಪುರದ ವಿನೋದ್ (31) ಎಂದು ಗುರುತಿಸಲಾಗಿದೆ.
ಕಾಞಂಗಾಡ್ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಚಿತ್ತಾರಿ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ವಿನೋದ್ರನ್ನು ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ನಿಲ್ಲಿಸದೆ ಪರಾರಿಯಾದ ಲಾರಿಯನ್ನು ಪಳ್ಳಿಕರೆ ಸಮೀಪದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.