ಮಂಗಳೂರು, ಫೆ.17 (DaijiworldNews/MB) : ಪ್ರ''ತಿದಿನ ಕೇರಳದಿಂದ ರಾಜ್ಯಕ್ಕೆ ಭೇಟಿ ನೀಡುವ ಜನರು ಕೊರೊನಾ ಸೋಂಕು ನೆಗಟಿವ್ ಪ್ರಮಾಣಪತ್ರಗಳನ್ನು (ಆರ್ಟಿ-ಪಿಸಿಆರ್) ಕಡ್ಡಾಯವಾಗಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಆರೋಗ್ಯ ಇಲಾಖೆಯ ಸೂಚನೆಗಳಿಗೆ ಅನುಗುಣವಾಗಿ, ಆಡಳಿತವು ಕೇರಳವನ್ನು ಸಂಪರ್ಕಿಸುವ ಜಿಲ್ಲೆಯ ಮೂರು ಗಡಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲು ಯೋಜಿಸಿದೆ. ಅಲ್ಲಿ ಕೊರೊನಾ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ'' ಎಂದು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ. ಹೇಳಿದ್ದಾರೆ.

''ರಾಜ್ಯದ ಹಾಸ್ಟೆಲ್ಗಳು, ರೆಸಾರ್ಟ್ಗಳು, ಹೊಟೇಲ್ಗಳು, ಹೋಂ ಸ್ಟೇ ಮತ್ತು ಇತರ ಸ್ಥಳಗಳಿಗೆ ಬರುವ ಜನರು ಆರ್ಟಿ-ಪಿಸಿಆರ್ ಪರೀಕ್ಷಾ ನೆಗೆಟಿವ್ ವರದಿ ಹೊಂದಿರಬೇಕು, ಅದನ್ನು ಚೆಕ್ಪೋಸ್ಟ್ಗಳಲ್ಲಿ ತೋರಿಸಬೇಕು'' ಎಂದು ಅವರು ಹೇಳಿದರು.
''ಪರೀಕ್ಷೆ 72 ಗಂಟೆಗಳಿಗಿಂತ ಅಧಿಕ ಕಾಲಕ್ಕೂ ಮುನ್ನಾ ಮಾಡಿಸಿರಬಾರದು'' ಎಂದು ಹೇಳಿದ ಅವರು, ''ಕೊರೊನಾ ಪಾಸಿಟಿವ್ ಇರುವವರ ಮಾದರಿಯನ್ನು ನಿಮ್ಹಾನ್ಸ್ ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು'' ಎಂದರು.