ಮಂಗಳೂರು, ಫೆ. 17 (DaijiworldNews/SM): ದೇಶದೆಲ್ಲೆಡೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರ್ಉವ ಹಿನ್ನೆಲೆಯಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪ್ರಜೆಗಳಿಂದ ಪ್ರಜೆಗಳೆಂಬ, ಪ್ರಜೆಗಳಿಗಾಗಿ ಎಂಬ ಪೋಸ್ಟರ್ ಅಡಿಯಲ್ಲಿ ಸಾಮಾಜಿಕ ಮುಖಂಡರು ಫೆಬ್ರವರಿ 18ರಂದು ಒಂದು ದಿನ ಪೆಟ್ರೋಲ್ ಪಂಪ್ ಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.


ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ದರವನ್ನು ಏರಿಕೆಯಾಗುತ್ತಿರುವುದನ್ನು ಖಂಡಿಸಿ ಹಾಗೂ ಸರಕಾರಗಳ ಜನ ವಿರೋದಿ ದೋರಣೆಯನ್ನು ಖಂಡಿಸಿ, ಯಾವುದೇ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಪೆಟ್ರೋಲ್ ಪಂಪ್ ಬಹಿಷ್ಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ.
ದೇಶದ ಪ್ರಜೆಗಳೆಂಬ ಜವಾಬ್ದಾರಿಯಿಂದ, ಜಾತಿ ದರ್ಮ,ಬಾಷೆಯ ಅಂತರ ಮರೆತು ಭಾರತ ದೇಶದ ಹಿತದೃಷ್ಟಿಯಿಂದ ಪ್ರತಿಭಟಿಸಲು ಕೈ ಜೋಡಿಸಿ ಎಂದು ಆಗ್ರಹಿಸಲಾಗಿದೆ.