ಉಳ್ಳಾಲ, ಜು 13: ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ಪುರಾತನ ಕಾಲದಲ್ಲಿ ನಿರ್ಮಾಣಗೊಂಡಿರುವ ಉಳ್ಳಾಲ ರೈಲ್ವೆ ಸ್ಟೇಷನ್ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ. ಸುಮಾರು ೧೨೫ ವರ್ಷಗಳ ಹಿಂದಿನ ಕಟ್ಟಡ ಇದಾಗಿದೆ.
ಹಳೆಯ ಕಟ್ಟಡ ಹಾಗೂ ಶಿಥಿಲಾವಸ್ಥೆಯಲ್ಲಿದ್ದುದರಿಂದ ಮೂರು ತಿಂಗಳ ಹಿಂದೆಯಷ್ಟೇ ಅಧಿಕಾರಿಗಳ ಸೂಚನೆಯಂತೆ ಇಲ್ಲಿನ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಆದ್ದರಿಂದ ಕಟ್ಟಡವನ್ನು ಪ್ರಯಾಣಿಕರು ವಿಶ್ರಾಂತಿ ಕೊಠಡಿಯಾಗಿ ಉಪಯೋಗಿಸುತ್ತಿದ್ದರು. ಆದರೆ ಇಂದು ಈ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಒಂದು ಸಂದರ್ಭದಲ್ಲಿ ಕೊಠಡಿಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಸಾವು ನೋವು ಸಂಭವಿಸಿಲ್ಲ.