ಮಂಗಳೂರು, ಫೆ.18 (DaijiworldNews/PY): ಮಂಗಳೂರಿನ ಬಾಲಕಿ ಆದ್ರಿತಿ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಗೆ ಪಾತ್ರರಾಗಿದ್ದಾರೆ.

3ರ ಹರೆಯದ ಬಾಲಕಿ 1 ನಿಮಿಷದಲ್ಲಿ ಹತ್ತು ಶ್ಲೋಕ ಹೇಳಿ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ನ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾಳೆ.
10 ಶ್ಲೋಕಗಳನ್ನು ಕಂಠಪಾಠ ಮಾಡಿ ಹೇಳಿದ್ದಾಳೆ. ಮಂಗಳೂರಿನ ಬೋಳೂರು ನಿವಾಸಿ ರಿತೇಶ್ ಮೆಂಡನ್ ಹಾಗೂ ಕೃಪಾ.ಡಿ ದಂಪತಿಗಳ ಪುತ್ರಿ ಆದ್ರಿತಿ ಬಾಲ್ಯದಿಂದಲೇ ಶ್ಲೋಕಗಳನ್ನು ಕಂಠಪಾಠ ಮಾಡುತ್ತಿದ್ದಳು. ಇದೀಗ ಆಕೆ 1 ನಿಮಿಷದಲ್ಲಿ ಹತ್ತು ಶ್ಲೋಕ ಹೇಳಿ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಗೆ ಪಾತ್ರಳಾಗಿದ್ದಾಳೆ.
ಆದ್ರಿತಿಗೆ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಪುರಸ್ಕಾರ ಮಾಡಲಾಗಿದೆ.