ಉಡುಪಿ, ಫೆ.18 (DaijiworldNews/PY): ಪಿ.ಕೆ.ಪ್ರೊಡಕ್ಷನ್ಸ್ ಹಾಗೂ ಸ್ಟಾರ್ ಝೋನ್ ಫ್ಯಾಷನ್ ಸಂಸ್ಥೆಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬೈಂದೂರು ತಾಲೂಕಿನ ವಂಶಿಕಾ ಆಚಾರ್ ಅವರು ಮಾಸ್ಟರ್ ಮಿಸ್ ಲಿಟಲ್ ಬೆಂಗಳೂರು 2020-2021 ಪ್ರಶಸ್ತಿ ಪಡೆದುಕೊಂಡಿದ್ದಾರೆ.




ವಂಶಿಕಾ ಈ ಹಿಂದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 10ರ ಹರೆಯದ ವಂಶಿಕಾ ಬೆಂಗಳೂರಿನ ನಾಗರಭಾವಿಯ ಬಾಲವಿಕಾಸ್ ಇಂಟರ್ನ್ಯಾಷನಲ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.
ವಂಶಿಕಾ ಅವರ ಪೋಷಕರಾದ ಗೋಪಾಲ್ ಆಚಾರ್ ಹಾಗೂ ವಿಶಾಲಾ ಜಿ ಆಚಾರ್ ಅವರು ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ನಿವಾಸಿಗಳಾಗಿದ್ದು, ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ದೈಜಿವಲ್ಡ್ ಜೊತೆ ಮಾತನಾಡಿದ ಗೋಪಾಲ್ ಆಚಾರ್ ಅವರು, "ನಾವು ಈ ಸ್ಪರ್ಧೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಮಗಳಿಗೆ ಮಿಸ್ ಬೆಸ್ಟ್ ಟ್ಯಾಲೆಂಟೆಡ್ ಎನ್ನುವ ಹೆಸರು ನೀಡಲಾಗಿದೆ. ಈ ಬಗ್ಗೆ ನಾವು ನಿಜವಾಗಿಯೂ ಹೆಮ್ಮೆಪಡುತ್ತೇವೆ" ಎಂದಿದ್ದಾರೆ.
ಸ್ಪರ್ಧೆಯಲ್ಲಿ ಸುಮಾರು 300 ಮಕ್ಕಳು ಭಾಗಹಿಸಿದ್ದು, ಈ ಪೈಕಿ 35 ಮಕ್ಕಳು ಫಿನಾಲೆ ಹಂತಕ್ಕೆ ತಲುಪಿದ್ದರು.