ಮಂಗಳೂರು, ಫೆ.18 (DaijiworldNews/PY): ಫೆ.18ರ ಗುರುವಾರದಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆ ಸೇರಿದಂತೆ ಇಬ್ಬರನ್ನು ತಪಾಸಣೆ ಮಾಡಿದ ಸಂದರ್ಭ ಸ್ಯಾನಿಟರಿ ನ್ಯಾಪ್ಕಿನ್ನಲ್ಲಿ ಅಡಗಿಸಿಟ್ಟಿದ್ದ 53.50 ಲಕ್ಷ. ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.
ಫೆ.11ರಂದು ಭಟ್ಕಳ ಮೂಲದ ಪ್ರಯಾಣಿಕರು ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ 10 ಲಕ್ಷ. ರೂ ಮೌಲ್ಯದ 0.2 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.