ಕಾಸರಗೋಡು, ಫೆ. 18 (DaijiworldNews/SM): ಜಿಲ್ಲೆಯ ಮುಹಮ್ಮದ್ ಅಝರುದ್ದೀನ್ ಐಪಿಎಲ್ ಟೂರ್ನಮೆಂಟ್ ಗೆ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್ 14ನೇ ಆವೃತ್ತಿಯಲ್ಲಿ 292 ಆಟಗಾರರು ಹರಾಜಿನ ಕಣದಲ್ಲಿದ್ದರು. ಈ ಪೈಕಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಅಝರುದ್ದೀನ್ ಆಯ್ಕೆಯಾಗಿದ್ದಾರೆ. 20 ಲಕ್ಷ ರೂಪಾಯಿ ಬಿಡ್ ಮೂಲಕ ಅಝರುದ್ದೀನ್ ಅವರನ್ನು ಖರೀದಿಸಿದ್ದಾರೆ.
ಅಝರುದ್ದೀನ್ ಅವರು ಕಾಸರಗೋಡಿನ ತಳಂಗರ ನಿವಾಸಿಯಾಗಿದ್ದಾರೆ. ಕೇರಳ ರಣಜಿ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಟಗಾರರಾಗಿದ್ದಾರೆ. ರಣಜಿ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. 37 ಎಸೆತದಲ್ಲಿ 100 ರನ್ ಗಳಿಸಿ ಸಾಧನೆ ಮರೆದಿದ್ದರು. ಹಾಗೂ ಎಲ್ಲರ ಗಮನ ಸೆಳೆದಿದ್ದರು.