ಮಂಗಳೂರು ಸೆ 28: ಕೃಷಿ ಭೂಮಿ, ಸೂಕ್ತ ಕಾರ್ಮಿಕರ ಕೊರತೆಯಿಂದ, ಬೆಳೆಯುವ ಬೆಳೆಗೆ ಸೂಕ್ತ ಬೆಲೆ ದೊರಕದೆಯೋ ಏನೋ ಬಹಳಷ್ಟು ಕಡೆ, ಹಡಿಲು ಬಿದ್ದಿದೆ. ಸುಮಾರು 20 ವರ್ಷಗಳಿಂದ ಕೊಣಾಜೆ ಸಮೀಪದ ಮೇಲಿನ ಮನೆ ಗಟ್ಟಿಮೂಲೆಯ ಬದನೆಮಾರ್ ಗದ್ದೆ , ಹಡಿಲು ಬಿದ್ದಿದ್ದ ಏಳು ಎಕರೆ ಕೃಷಿ ಭೂಮಿಯನ್ನು ವಿದ್ಯಾರ್ಥಿಗಳ ತಂಡ ಕಳೆದ ಎರಡು ತಿಂಗಳಿನಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಾನವ ಶ್ರಮ ವಿನಿಯೋಗಿಸಿ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದೆ, ಕಳೆದ ಭಾನುವಾರ ನಾಲ್ಕು ಗದ್ದೆಗಳಲ್ಲಿ ನೇಜಿ ನಾಟಿ ನಡೆಸಿದ್ದು ಉಳಿದ ಗದ್ದೆಗಳಲ್ಲಿ ನೇಜಿ ನಾಟಿ ಕಾರ್ಯ ಸೆ.28 ರ ಅಂದ್ರೆ ಇಂದು ನಡೆಯಲಿದೆ. ಪಾಳು ಬಿದ್ದ ಭೂಮಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇಲ್ಲಿನ ಎನ್ಎಸ್ಎಸ್ ನೇತೃತ್ವದಲ್ಲಿ ಕೊಣಾಜೆ ಗ್ರಾಮದ ಎರಡನೇ ವಾರ್ಡ್ ದತ್ತು ಸ್ವೀಕರಿಸಿ ಇಂದು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದೆ. ಪ್ರಥಮ ಬಾರಿಗೆ ತುಳುನಾಡಿನ ಕೃಷಿ ನಾಟಿ ಕಾರ್ಯದಲ್ಲಿ ಮಂಗಳೂರು ವಿವಿಯಲ್ಲಿ ಕಲಿಯುತ್ತಿರುವ ಸುಮಾರು 25 ದೇಶಗಳ 50 ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಸರಕಾರಿ ಕಾಲೇಜಿನ ವಿದ್ಯಾರ್ಥಿಹಳಿಗೆ ಸಾಥ್ ನೀಡಲಿದ್ದು, ಇದರೊಂದಿಗೆ ನರೇಂದ್ರ ರೈ ದೇರ್ಲ ಇವರಿಂದ ಕೃಷಿ ಸಂವಾದ ನಡೆಯಲಿದೆ. ನೇಜಿ ನಾಟಿ ಕಾರ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ವಿವಿ ಕುಲಪತಿ ಪ್ರೊ. ಕೆ ಭೈರಪ್ಪ ಭಾಗವಹಿಸಲಿದ್ದಾರೆ.