ಮಂಗಳೂರು, ಫೆ.19 (DaijiworldNews/MB) : ಫೆಬ್ರವರಿ 10 ರಂದು ಮಂಗಳೂರು ಹೊರವಲಯದ ಕಾಟಿಪಳ್ಳ ಎಂಬಲ್ಲಿ ರೌಡಿಶೀಟರ್ ಪಿಂಕಿ ನವಾಸ್ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಹಾಗೂ ಸಿಸಿಬಿಯು ಒಂಬತ್ತು ಜನರನ್ನು ಬಂಧಿಸಿದ್ದಾರೆ.


ಬಂಧಿತರನ್ನು ಕಾಟಿಪಳ್ಳ ಮೂಲದ ಪ್ರಶಾಂತ್ ಭಂಡಾರಿ (29), ಕಾಟಿಪಳ್ಳದ ಶಕೀಬ್ (29), ಕೃಷ್ಣಾಪುರದ ಶೈಲೇಶ್ ಪೂಜಾರಿ (19), ಕಾಟಿಪಳ್ಳದ ಹನೀಫ್ (20), ಹೆಜಮಾಡಿಯ ಸುವೀನ್ ಕಾಂಚನ್ (23), ಕಾಟಿಪಳ್ಳದ ಲಕ್ಷ್ಮಿಶ (26), ಕಾಟಿಪಳ್ಳದ ಅಹ್ಮದ್ ಸಾದಿಕ್ (23), ಕಾಟಿಪಳ್ಳದ ನಿಸ್ಸಾರ್ ಹುಸೇನ್ (29) ಮತ್ತು ಕಾಟಿಪಳ್ಳದ ರಂಜನ್ ಶೆಟ್ಟಿ (24) ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಕಾರಿನಲ್ಲಿ ಬಂದಿದ್ದು ನವಾಜ್ ಮೇಲೆ ಹಲ್ಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಅಪರಾಧ ಕೃತ್ಯದಲ್ಲಿ ಬಳಸಿದ ಶಸ್ತ್ರಾಸ್ತ್ರಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಶಕೀಬ್ ಮತ್ತು ಪ್ರಶಾಂತ್ ಅವರು ನವಾಜ್ ಅವರೊಂದಿಗೆ ವೈಯಕ್ತಿಕ ದ್ವೇಷವನ್ನು ಹೊಂದಿದ್ದರು. ಹಾಗಾಗಿ ಹಲ್ಲೆ ನಡೆಸಲು ಇತರರ ಸಹಾಯವನ್ನು ಕೋರಿದರು. ಈ ಹಲ್ಲೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿರುವವರ ಬಂಧನ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
2018 ರಲ್ಲಿ, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ನಾಲ್ಕು ದುಷ್ಕರ್ಮಿಗಳು ಮಾರಕ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದರು. ಈ ಪ್ರಕರಣದಲ್ಲಿ ನವಾಜ್ ಪ್ರಮುಖ ಆರೋಪಿ. ಪಿಂಕಿ ನವಾಜ್ ಮೇಲಿನ ದಾಳಿಯ ಆರೋಪಿಗಳಲ್ಲಿ ಒಬ್ಬರಾದ ಪ್ರಶಾಂತ್ ಭಂಡಾರಿ ದೀಪಕ್ ರಾವ್ ಅವರೊಂದಿಗೆ ಆಪ್ತರಾಗಿದ್ದರು ಎಂದು ಹೇಳಲಾಗಿದೆ.