ಕಾರ್ಕಳ, ಫೆ. 19 (DaijiworldNews/SM): ಕ್ಷುದ್ರದೋಷ ಪರಿಹಾರ ಕಲ್ಪಿಸುವುದಾಗಿ ನಂಬಿಸಿದ ಮಹಿಳೆಯೊಬ್ಬಳು ಯುವಕನಿಗೆ 30 ಲಕ್ಷ ರೂ. ಪಂಗನಾಮ ಹಾಕಿದ ಘಟನೆ ನಡೆದಿದೆ. ಮಿಯ್ಯಾರು ಮಂಜಡ್ಕ ಮನೆಯ ಲೋಯ್ ಮಚಾದೋ(36) ವಂಚನೆಗೊಳಗಾದವರು.

ಮುಡಾರಿನ ನಿವಾಸಿ ಸುನೀತಾ ಮೆಂಡೋನ್ಸಾ ಪ್ರಕರಣದ ಆರೋಪಿ. ಈಕೆ ತನ್ನ ಗಂಡ ವಿದೇಶದಲ್ಲಿ ಇದ್ದು, ತನಗೆ ಆರೋಗ್ಯ ಹದಗೆಟ್ಟಿದೆ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾ ಪರಿಚಯಿಸಿಕೊಂಡಿದ್ದಳು. ಅಕೆಯ ಮಾತಿಗೆ ನಂಬಿದ ಲೋಯ್ ಮಚಾದೋ, ಆಕೆ ಹಾಗೂ ಆಕೆಯ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದದ್ದ. ಬಳಿಕ ಆಕೆ ವಿದೇಶಕ್ಕೆ ಹೋಗಿದ್ದಳು. ಕೆಲ ಕಾಲದ ವರೆಗೆ ದಂಪತಿಗಳು ವಿದೇಶದಲ್ಲಿ ನೆಲೆಸಿದ್ದು, ಕೆಲಸ ಕಳೆದ ಕೊಂಡ ಆಕೆಯ ಪತಿ ಊರಿಗೆ ಹಿಂತಿರುಗಿದ್ದನು. ಕರೋನಾ ಸಂಕಷ್ಟದಲ್ಲಿ ಆಕೆಯೂ ಕೂಡಾ ಊರಿಗೆ ಬಂದಿದ್ದಳು.
2016ರಲ್ಲಿ ಲೋಯ್ ಮಚಾದೋ ತಮ್ಮ ಜೋಯ್ ಮಚಾದೋ ಅವರ ವಿವಾಹ ಏರ್ಪಟ್ಟಿತ್ತು. ಜೌತಣಕೂಟಕ್ಕೆ ಮನೆ ಮಂದಿಯನ್ನು ಸುನೀತಾ ಮೆಂಡೋನ್ಸಾ ಆಹ್ವಾನಿಸಿದ್ದಳು. ಆ ವೇಳೆಗೆ ಲೋಯ್ ಮಚಾದೋ ರವಲ್ಲಿ ಮಹಿಳೆ, ತನ್ನ ಕಾಯಿಲೆ ವಾಸಿಯಾಗಿದೆ ಎಂದಿದ್ದಾಳೆ. ಗುರುಗಳು 25 ಸಾವಿರ ರೂಪಾಯಿ ಪಡೆದು ರೋಗ ಗುಣಪಡಿಸಿದ್ದಾರೆ ಎಂದು ನಂಬಿಸಿದ್ದಾಳೆ. ಮಾತು ಮುಂದುವರಿಸಿ ನಿನ್ನ ಮನೆಯಲ್ಲಿ ನಾಗದೋಷ, ಸ್ತ್ರೀ ದೋಷ, ಮಾಟದ ಭೀತಿ ಇನ್ನಿತರ ಸಮಸ್ಸೆಗಳು ಇವೆ. ಗುರುಗಳಲ್ಲಿ ಹೇಳಿ ಅವುಗಳನ್ನೆಲ್ಲ ಸರಿಪಡಿಸುವುದಾಗಿ ತಿಳಿಸಿದ್ದಳು. ಗುರುಗಳ ವಿವರವನ್ನು ನೀಡಲು ಆಕೆ ನಿರಾಕರಿಸಿದಲ್ಲದೇ ಅದರಿಂದ ತೊಂದರೆಯೇ ಹೆಚ್ಚು. ಪ್ರಾರ್ಥನೆ ಫಲಿಸುವುದಿಲ್ಲ ಎಂಬ ಭಯ ಹುಟ್ಟಿಸಿದ್ದಳು.
ದೋಷ ನಿವಾರಣೆಯ ನೆಪದಲ್ಲಿ ಮೊಂದಲ ಹಂತದಲ್ಲಿಯೇ ಭಾರೀ ಮೊತ್ತವನ್ನು ಆಕೆ ಪಡೆದಿದ್ದಳು.ಲೋಯ್ ಮಚಾದೋ ಅವರಿಗೆ ಕರೆ ಮಾಡಿದ ಸುನೀತಾ ಮೆಂಡೋನ್ಸಾ ನಿನ್ನ ತಮ್ಮನ ಪತ್ನಿ ನಿನಗೆ ಮಾಟ ಮಂತ್ರ ಮಾಡಿದ್ದಾರೆ ಎಂದು ಹೇಳುತ್ತಾ ಮನೆ ಮಂದಿಯರ ನಡುವೆ ಒಡಕು ಮೂಡಿಸಿದ್ದಳು. ಗುರುಗಳಿಗೆ ಹಣ ನೀಡಬೇಕೆಂದು ಮತ್ತೇ ದಂಬಾಲು ಬಿದ್ದದ್ದಳು. ಆಕೆಯ ಮಾತಿನ ಮೋಡಿಗೆ ಬಿದ್ದ ಲೋಯ್ ಮಚಾದೋ ಪತ್ನಿಯ ಮಾಂಗಲ್ಯ ಸರ ಸೇರಿ ಸುಮಾರು ರೂ.10 ಲಕ್ಷ ಮೊತ್ತವನ್ನು ಹಂತ ಹಂತವಾಗಿ ನೀಡಿದ್ದ. ಮತ್ತೇ ಹಣಕ್ಕಾಗಿ ಸುನೀತಾ ಪೀಡಿಸಿದಾಗ ಪತ್ನಿ ತಂದೆಯಿಂದ ರೂ.80 ಸಾವಿರ, ಸ್ನೇಹಿತರಾದ ರಾಕೇಶ್, ವಿಕ್ಟರ್ನಿಂದ ರೂ.1 ಲಕ್ಷ, ಸಹೋದರ ಪೌಲ್ ಮಚದೋರಿಂದ ರೂ.೫೦ ಸಾವಿರ, ಕೆಲಸದ ಸಂಗತಿಗಳಿಂದ ರೂ.1 ಲಕ್ಷ ಸೇರಿದಂತೆ ಒಟ್ಟು 30 ಲಕ್ಷ ರೂಪಾಯಿವರೆಗೆ ನೀಡಿ ಮೋಸಕ್ಕೆ ಒಳಗಾಗಿದ್ದಾನೆ.
ಈ ಕುರಿತು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.