ಕಾಸರಗೋಡು, ಫೆ.20 (DaijiworldNews/PY): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಳೆ ಕಾಸರಗೋಡಿಗೆ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲ ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.

"ಮಧ್ಯಾಹ್ನ 3 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ ಕುಂಬಳೆಯಿಂದ ವಿದ್ಯಾನಗರ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣ ತರಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
"ಮಂಗಳೂರಿನಿಂದ ಕಾಸರಗೋಡು, ಕಣ್ಣೂರು ಕಡೆಗೆ ತೆರಳುವ ವಾಹನಗಳು ಕುಂಬಳೆ ಪೇಟೆ ಮೂಲಕ ಸಾಗಿ ಕುಂಬಳೆ ಸೀತಾಂಗೋಳಿ ರಸ್ತೆಯ ಮೂಲಕ ಸಂಚರಿಸಿ ಸೀತಾಂಗೋಳಿಯಿಂದ ಉಳಿಯತ್ತಡ್ಕ ರಸ್ತೆಯಾಗಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ವಿದ್ಯಾನಗರ ರಸ್ತೆಗೆ ಪ್ರವೇಶಿಸಬೇಕು. ಕುಂಬಳೆ, ಮಂಗಳೂರು ಕಡೆಗೆ ತೆರಳುವ ವಾಹನಗಳು ಇದೆ ದಾರಿಯಾಗಿ ಸಂಚರಿಸಿ ಕುಂಬಳೆ ಪೇಟೆ ಮೂಲಕ ರಾಷ್ಟೀಯ ಹೆದ್ದಾರಿ ಪ್ರವೇಶಿಸಬೇಕು.ಕುಂಬಳೆ, ಮೊಗ್ರಾಲ್ ಪುತ್ತೂರು ಕಡೆಗಳಲ್ಲಿನ ಲಘು ವಾಹನಗಳು ಚೌಕಿ, ಉಳಿಯತ್ತಡ್ಕ ದಾರಿಯಾಗಿ ವಿದ್ಯನಾಗರ ರಸ್ತೆಯ ಮೂಲಕ ಸಂಚರಿಸಬೇಕು" ಎಂದು ತಿಳಿಸಿದ್ದಾರೆ.
"ಟ್ಯಾಂಕರ್ ಹಾಗೂ ಘನ ಸರಕು ವಾಹನಗಳು ಮೊಗ್ರಾಲ್, ಕಾಞ೦ಗಾಡ್ ಸೌತ್ ಮೊದಲಾದೆಡೆಗಳಲ್ಲಿ ನಿಲುಗಡೆ ಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ" ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆ ಉದ್ಘಾಟನೆಗೆ ಯೋಗಿ ಆದಿತ್ಯನಾಥ್ ನಾಳೆ ಕಾಸರಗೋಡಿಗೆ ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಉತ್ತರಪ್ರದೇಶ ಎ.ಡಿ.ಜಿ.ಪಿ ನೇತೃತ್ವದ ಪೊಲೀಸ್ ತಂಡ ಸಮಾವೇಶ ನಡೆಯುವ ಸ್ಥಳಕ್ಕೆ ತಲುಪಿ ಭದ್ರತೆ ಪರಿಶೀಲನೆ ನಡೆಸಿದೆ.