ಮಂಗಳೂರು, ಫೆ.20 (DaijiworldNews/PY): ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 200ನೇ ವರ್ಷದ ಮಂಗಳೂರು ರಥೋತ್ಸವ ಫೆ.19ರ ಶುಕ್ರವಾರದಂದು ನಡೆಯಿತು.








ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು.
ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ, ಪಂಚಾಮೃತ ಅಭಿಷೇಕ ನಡೆಯಿತು. ಬಳಿಕ ಶ್ರೀಗಳಿಂದ ತಂದ ಶ್ರೀವೀರ ವೆಂಕಟೇಶ ದೇವರಿಗೆ ಶತ ಕಲಶಾಭಿಷೇಕ, ಗಂಗಾಭಿಷೇಕ, ಮಹಾ ಮಂಗಳಾರತಿ ನಡೆಯಿತು. ಮಧ್ಯಾಹ್ನ ದೇವರು ಯಜ್ಞ ಮಂಟಪಕ್ಕೆ ಆಗಮಿಸಿದ್ದು, ಸಾಯಂಕಾಲ ಯಜ್ಞ ಪೂರ್ಣಾಹುತಿಯ ಬಳಿಕ ಆರತಿ ಬೆಳಗಲಾಯಿತು.
ಸರ್ವಾಲಂಕಾರಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರನ್ನು ಪುಷ್ಪಾಲಂಕೃತ ಚಿನ್ನದ ಪಲ್ಲಕ್ಕಿಯಲ್ಲಿ ದೇವಾಲಯದಿಂದ ರಥದ ಬಳಿಗೆ ತರಲಾಯಿತು. ನಂತರ ಸಾಂಪ್ರದಾಯಿಕ ಪ್ರದಕ್ಷಿಣೆ ನಡೆಯಿತು. ಪಲ್ಲಕ್ಕಿಯನ್ನು ಭುಜ ಸೇವೆಯಿಂದ ಏರಿಸಲಾಯಿತು.
ವಾದ್ಯ, ಮಂಗಳವಾದ್ಯ, ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ದೇವರ ಬ್ರಹ್ಮರಥೋತ್ಸವ ನೆರವೇರಿತು. ದೇಶ ವಿದೇಶಗಳಿಂದ ರಥೋತ್ಸವಕ್ಕೆ ಬಂದ ಜನರು ತೇರಿನ ವೈಭವವನ್ನು ಕಣ್ತುಂಬಿಕೊಂಡರು.