ಮಂಗಳೂರು, ಫೆ. 20 (DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರಿಂದ ಅಕ್ರಮವಾಗಿ ತರುತ್ತಿದ್ದ 19,01,460 ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಶೇಕ್ ಹನೀಫಾ (26) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಶೇಕ್ ಹನೀಫಾ ದುಬೈನಿಂದ ಏರ್ ಇಂಡಿಯಾ ವಿಮಾನ ಐಎಕ್ಸ್ 1814 ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದು, ಆತನ ಪ್ರೊಫೈಲಿಂಗ್ ವೇಳೆಯಲ್ಲಿ ಪಾದರಸ ಲೇಪಿತ ಇ ಆಕಾರದ ಫಲಕಗಳಲ್ಲಿನ ಚಿನ್ನ ಮತ್ತು ಪಾದರಸ ಲೇಪಿತ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಸ್ಟಮ್ಸ್ ತಂಡದ ನೇತೃತ್ವವನ್ನು ಉಪ ಆಯುಕ್ತ ಡಾ.ಕಪಿಲ್ ಗಡೆ ಐಆರ್ಎಸ್ ವಹಿಸಿದ್ದರು, ನಾಗೇಶ್ ಕುಮಾರ್, ಭೂಮ್ಕರ್, ವಿರಾಗ್ ಶುಕ್ಲಾ ಹಾಗೂ ಇತರರು ಸಕ್ರಿಯ ಪಾತ್ರ ವಹಿಸಿದ್ದಾರೆ.