ಮಲ್ಪೆ, ಫೆ. 20 (DaijiworldNews/HR): ಮಲ್ಪೆ ಬಂದರಿನಿಂದ ಮಹಾಬಲೇಶ್ವರ ಮೀನುಗಾರಿಕಾ ಬೋಟಿನಲ್ಲಿದ್ದ ವಿಶ್ವನಾಥ(48) ಎಂಬವರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ವಿಶ್ವನಾಥ ಹಾಗೂ ಮೀನುಗಾರರಾದ ದಿನಕರ ಕಲ್ಯಾಣಪುರ, ವಿಶ್ವನಾಥ ಕಲ್ಯಾಣಪುರ ಅವರೊಂದಿಗೆ ಮೀನುಗಾರಿಕೆಗೆ ತೆರಳಿದ್ದು ಫೆಬ್ರವರಿ 17 ರಂದು ಬೆಳಿಗ್ಗೆ 4:15 ಗಂಟೆಗೆ 26 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಮಯ ಗಾಳಿಯ ಅಬ್ಬರಕ್ಕೆ ದೊಡ್ಡದಾದ ಅಲೆಗಳಿಂದ ಬೋಟು ಅಲುಗಾಡಿದ್ದು ಆಗ ಬೋಟಿನಲ್ಲಿದ್ದ ವಿಶ್ವನಾಥ ಸಮುದ್ರಕ್ಕೆ ಬಿದ್ದಿದ್ದಾರೆ. ಆಗ ಜೊತೆಗಿದ್ದವರು ಹುಡುಕಾಡಿದರು ಪತ್ತೆಯಾಗಿರಲಿಲ್ಲ. ಬಳಿಕ 19 ರಂದು ಸಂಜೆ 4:30 ಗಂಟೆಗೆ ಸಮುದ್ರದ ನೀರಿಗೆ ಬಿದ್ದ ಸ್ವಲ್ಪ ದೂರದಲ್ಲಿ ಒಂದು ಮೃತ ತೇಲುತ್ತಿರುವುದು ಕಂಡುಬಂದಿದ್ದು, ಪರಿಶೀಲಿಸಿದಾಗ ಅದು ವಿಶ್ವನಾಥ ಅವರ ಮೃತ ದೇಹವೆಂದು ಗುರುತಿಸಿ ಅದೇ ಬೋಟಿನಲ್ಲಿ ಮೃತ ದೇಹವನ್ನು ಹಾಕಿಕೊಂಡು ಬಂದು ಉಡುಪಿ ಅಜ್ಜರಕಾಡು ಆಸ್ಪತ್ರೆ ಶವಾಗಾರದಲ್ಲಿ ಇಡಲಾಯಿತು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.