ಉಪ್ಪಳ, ಫೆ.20 (DaijiworldNews/MB) : ಉಪ್ಪಳ ಪೇಟೆಯಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.



ಹಿಂಬದಿಯ ಕಿಟಿಕಿ ಮುರಿದು ಒಳನುಗ್ಗಿರುವ ಕಳ್ಳರು ಕಡತಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಗಾಜುಗಳನ್ನು ಹುಡಿ ಮಾಡಲಾಗಿದೆ.
ಅಂಚೆ ಕಚೇರಿಯ ಭದ್ರತಾ ಕೊಠಡಿಗೂ ನುಗ್ಗಿದ್ದು, ಆದರೆ ಹಣ ಇರಿಸಿದ್ದ ಪೆಟ್ಟಿಗೆಯನ್ನು ತೆರೆಯಲಾಗಿಲ್ಲ.
ಸ್ಥಳಕ್ಕೆ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಶ್ವಾನ ದಳ ಹಾಗೂ ಹಾಗೂ ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ.