ಉಡುಪಿ, ಫೆ.20 (DaijiworldNews/MB) : ''ರಾಮ ಮಂದಿರವನ್ನು ನಿರ್ಮಾಣಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಹಣ ನಮಗೆ ಬೇಡ'' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಫೆಬ್ರವರಿ 20 ರ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಪಿಎಫ್ಐ ರಾಷ್ಟ್ರ ವಿರೋಧಿ ಸಂಘಟನೆ. ದು ನಮ್ಮ ಆರ್ಎಸ್ಎಸ್ ಸ್ವಯಂಸೇವಕರನ್ನು ಕೊಲ್ಲುತ್ತಿದೆ. ರಾಮ ಮಂದಿರ ನಿರ್ಮಿಸಲು ಅವರ ಹಣ ನಮಗೆ ಬೇಡ. ರಾಮ ಮಂದಿರ ವಿರುದ್ದ ಪಿಎಫ್ಐ ನೀಡಿದ ಹೇಳಿಕೆ ರಾಷ್ಟ್ರ ವಿರೋಧಿಯಾದದ್ದು'' ಎಂದರು.
''ಪಿಎಫ್ಐ ನಿಷೇಧಿಸಲು ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಪಿಎಫ್ಐ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳ ಬಗ್ಗೆ ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಅದನ್ನು ನಿಷೇಧಿಸಲಾಗುವುದು'' ಎಂದು ತಿಳಿಸಿದರು.
''ಕೇರಳದಲ್ಲಿ, ಪಿಎಫ್ಐ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಮೆರವಣಿಗೆಗಳನ್ನು ನಡೆಸುತ್ತಿದೆ. ಪಿಎಫ್ಐ ರಾಷ್ಟ್ರ ವಿರೋಧಿ ಸಂಘಟನೆ ಎಂದು ತಿಳಿದ ನಂತರವೂ ಕೇರಳ ಸರ್ಕಾರ ಕೇವಲ ಮತಗಳನ್ನು ಗಳಿಸಲು ಅದಕ್ಕೆ ಮೆರವಣಿಗೆ ನಡೆಸಲು ಅನುಮತಿ ನೀಡುತ್ತಿದೆ'' ಎಂದು ದೂರಿದರು.
"ಪಿಎಫ್ಐ ಸದಸ್ಯರು ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪಿಎಫ್ಐ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮೂಲಕ ಕೇರಳ ಸರ್ಕಾರ ಮುಸ್ಲಿಮರ ಓಲೈಕೆಗೆ ಪ್ರಯತ್ನಿಸುತ್ತಿದೆ. ಕೇರಳ ಸರ್ಕಾರದ ಕ್ರಮವನ್ನು ನಾವು ಖಂಡಿಸುತ್ತೇವೆ" ಎಂದರು.
ಮಂಗಳೂರಿನಲ್ಲಿ ನಡೆದ ಘಟನೆಯ ಕುರಿತು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ''ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನಾವು ಈ ಬಗ್ಗೆ ತನಿಖೆ ನಡೆಸಿ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ'' ಎಂದು ಹೇಳಿದರು.
ಟೋಲ್ಗೇಟ್ ವಿಚಾರ
ಟೋಲ್ ಶುಲ್ಕದಿಂದ ವಿನಾಯಿತಿ ಕೋರಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಶೋಭಾ ಅವರು, "ಸ್ಥಳೀಯರಿಗೆ 265 ರೂ.ಗಳಿಗೆ ಪಾಸ್ಗಳನ್ನು ನೀಡಲಾಯಿತು. ಈ ವ್ಯವಸ್ಥೆಯು ರಾಷ್ಟ್ರದಾದ್ಯಂತ ಕಾರ್ಯನಿರ್ವಹಿಸುತ್ತದೆ. ನಮ್ಮ ಪ್ರದೇಶದಲ್ಲಿ, ಅನೇಕ ಸಂಘಗಳು ಪ್ರಮಾಣವನ್ನು ಕಡಿಮೆ ಮಾಡಲು ಪ್ರತಿಭಟನೆ ನಡೆಸುತ್ತಿವೆ. ನಾವು ಸಂಬಂಧಪಟ್ಟ ಏಜೆನ್ಸಿಯೊಂದಿಗೆ ಚರ್ಚಿಸುತ್ತೇವೆ. ಸೋಮವಾರ ನಡೆಯಲಿರುವ ದಿಶಾ ಸಭೆಗೆ ಎನ್ಎಚ್ಎಐ ಮತ್ತು ಟೋಲ್ ಗೇಟ್ ಅಧಿಕಾರಿಗಳನ್ನು ಆಹ್ವಾನಿಸುವಂತೆ ನಾನು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಮೊತ್ತವನ್ನು ಕಡಿಮೆ ಮಾಡಲು ನಾವು ಅವರನ್ನು ವಿನಂತಿಸಬೇಕಾಗಿದೆ'' ಎಂದು ಮಾಹಿತಿ ನೀಡಿದರು.