ಉಡುಪಿ, ಫೆ.20 (DaijiworldNews/MB) : ''ಕೃಷ್ಣೈಕ್ಯರಾಗಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ನೆನಪಿಗಾಗಿ ಈ ಬಾರಿ ಬಜೆಟ್ನಲ್ಲಿ ಸ್ಮ್ರತಿ ವನವನ್ನು ಘೋಷಣೆ ಮಾಡಲಾಗುವುದು. ಅದಕ್ಕಾಗಿ ಸೂಕ್ತ ಜಾಗದ ಗುರುತಿಸುವ ಕೆಲಸ ಆದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಆಮೆಗಳ ರಕ್ಷಣೆ, ಚಿಕಿತ್ಸೆಗಾಗಿ ಮತ್ತು ಪುನರ್ವಸತಿ ಕೇಂದ್ರವನ್ನು ನಿರ್ಮಿಸುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಮಾಡಲಾಗಿದೆ'' ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ್ ಹೆಗ್ಡೆ ಆಶಿಸರ್ ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ''ಕುಂದಾಪುರದ ಕಾಂಡ್ಲವನವನ್ನು ಜೀವ ವೈವಿಧ್ಯ ಕಾಯ್ದೆಯ ಅಡಿಯಲ್ಲಿ ಪಾರಂಪರಿಕ ಜೀವ ವೈವಿಧ್ಯ ಪ್ರದೇಶ ಎಂದು ಗುರುತಿಸಲು ನಿರ್ಧಾರ ಮಾಡಲಾಗಿದೆ. ಸಂಬಂಧ ಪಟ್ಟ ಮಂಡಳಿ ಯಲ್ಲಿ ಘೋಷಣೆ ಮಾಡಲಿದ್ದೇವೆ. ಟಿಸಿಎಪ್ ಮತ್ತು ಸಿಆರ್ ಜಡ್ ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ಘೋಷಣೆ ಮಾಡಲಿದ್ದೇವೆ'' ಎಂದರು.
ಸೋಲಾರ್ ಬೇಲಿ ನಿರ್ಮಾಣ ಕ್ಕೆ 100% ಸಬ್ಸಿಡಿ?
ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಸೋಲಾರ್ ಪೆನ್ಸಿಂಗ್ (ಬೇಲಿ) ಮಾಡುವ ಪ್ರಸ್ತಾವನೆ ಕೂಡ ಸರಕಾರದ ಹಂತದಲ್ಲಿದೆ. ರಾಜ್ಯದ ಎಲ್ಲಾ ಕಡೆ ಮಂಗಗಳ ಹಾವಳಿ ಹೆಚ್ಚಾಗಿದೆ. ಆದರೆ ಮಂಗಗಳ ಹಾವಳಿಯಿಂದುಂಟಾದ ಹಾನಿಗೆ ಯಾವುದೇ ಪರಿಹಾರ ಸರಕಾರದಿಂದ ಕೊಡುತ್ತಿಲ್ಲ. ಸೋಲಾರ್ ಬೇಲಿ ನಿರ್ಮಾಣ ಕ್ಕೆ 100% ಸಬ್ಸಿಡಿ ಕೊಡಬೇಕು ಎನ್ನುವುದು ಆಗ್ರಹ ಇದೆ.
ಪ್ರತಿ ಪಂಚಾಯತ್ ಮಟ್ಟದಲ್ಲಿ ಜೀವ ವೈವಿಧ್ಯ ರಕ್ಷಣಾ ಸಮಿತಿ ಇರಬೇಕು ಎಂಬ ಇದೆ. ಆದರೆ ಅದರ ಜಾಗೃತಿ ಜನರಲ್ಲಿ ಕಡಿಮೆ ಇದೆ. ಮುಂದೆ ಅದು ಸಕ್ರಿಯವಾಗುವ ಕಡೆಗೆ ಕೆಲಸ ಮಾಡುತ್ತೇವೆ ಎಂದರು
ಡೀಮ್ಡ್ ಪಾರೆಸ್ಟ್ ಗಳನ್ನು ರಕ್ಷಣೆ ಮಾಡ್ಲಿಕ್ಕೆ ವಿಶೇಷ ಯೋಜನೆ ರೂಪಿಸಲಾಗುತ್ತದೆ. ಮೇ ತಿಂಗಳಲ್ಲಿ ಅದರ ಸರಿಯಾದ ರೂಪುರೇಷೆ ಸಿದ್ದವಾಗುವ ನಿರೀಕ್ಷೆ ಇದೆ ಎಂದರು.
15 ಹೊಸ ಮತ್ಸ್ಯಧಾಮಕ್ಕೆ ಪ್ರಸ್ತಾವನೆ:
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವಾರು ಕಡೆ ಅಪರೂಪದ ಮೀನು ತಳಿಗಳ ರಕ್ಷಣೆಗಾಗಿ ಒಟ್ಟು 15 ಹೊಸ ಮತ್ಸ್ಯಧಾಮಗಳನ್ನು ನಿರ್ಮಿಸಲು ಪಟ್ಟಿ ಸಿದ್ದವಾಗಿದೆ. ಅದರಲ್ಲಿ, ರಂಗನತಿಟ್ಟು, ಮುತ್ತತ್ತಿ, ಶಿಶಿಲ, ಕುಶಾಲನಗರ ನಿಸರ್ಗ ಧಾಮ, ಕೆಲ್ಕಾರ್, ಮರಕತಾ, ಸೀತಾನದಿ, ನಾಕೂರ್ ಗಯ, ನಿಸರ್ಗ ಧಾಮ, ಭಗವತಿ ಛಾಯಕೊಳ್ಳ, ನಲ್ಕೂರು, ಉಪ್ಪು ಕುಳ, ರಾಮಂಗುಳಿ, ಅಡ್ಡಹೊಳೆ, ಪಾಕ, ಇವನ್ನು ಗುರುತಿಸಲ್ಪಟ್ಟಿದ್ದಾರೆ.
ಡಾ. ಪ್ರಕಾಶ್ ಮೇಸ್ತ, ಜಲ ಸಮುದ್ರ ತಜ್ಞ, ಕ್ಲಿಪರ್ಡ್ ಲೋಬೋ, ಎಸಿಎಪ್ ವಿಜಿಲೆನ್ಸ್ ತಂಡ, ಎಸಿ ಎಪ್ ಲೋಹಿತ್, ಡಿಎಫ್ ಒ ಆಶೀಶ್ ರೆಡ್ಡಿ ಮತ್ತು ಡಾ. ದಿನೇಶ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.