ಉಡುಪಿ,ಜು.15: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಥಳಿಸಿದ ಘಟನೆ ಉಡುಪಿಯ ಶಿರ್ವ ಗ್ರಾಮದ ಪಂಜಿಮಾರಿನಲ್ಲಿ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್ ಎಂದು ತಿಳಿದು ಬಂದಿದೆ. ಈತ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಲ್ಲದೆ, ಆಕೆಯ ಮೊಬೈಲ್ ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ, ಇವಿಷ್ಟೇ ಅಲ್ಲದೆ ಈತ ಹೊಟೇಲ್ ರೂಂ ಬುಕ್ ಮಾಡಿ ಮಹಿಳೆಯನ್ನು ಕರೆಯುತ್ತಿದ್ದ ಎಂದು ಮಹಿಳೆ ದೂರಿದ್ದಾರೆ. ಇನ್ನು ಕಾಮಾಂಧ ಸಂತೋಷ್ ಗೆ ಬಲೆ ಬೀಸಿದ ನೊಂದ ಮಹಿಳೆ ತನ್ನ ಫ್ಯಾನ್ಸಿ ಸ್ಟೋರ್ ಗೆ ಕರೆಸಿಕೊಂಡು ಪತಿಯ ಸಹಕಾರದಿಂದ ರೆಡ್ ಹ್ಯಾಂಡ್ ಆಗಿ ಹಿಡಿದು ಸಾರ್ವಜನಿಕರ ಎದುರಲ್ಲೇ ಥಳಿಸಿದ್ದಾರೆ. ಬಳಿಕ ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.