ಉಜಿರೆ, ಫೆ.21 (DaijiworldNews/MB) : ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಜಿರೆ ನಿವಾಸಿ ನಿವೃತ್ತ ಗ್ರಾಮ ಕರಣಿಕ ಚಂದ್ರ ಮೋಹನ್ ರೈ (80) ಅವರು ರವಿವಾರ ಸಾವನ್ನಪ್ಪಿದ್ದಾರೆ.

ಶನಿವಾರ ಫೆ. ೨೦ ರಂದು ಸಂಜೆ ವೇಳೆಗೆ ಅವರು ವಾಕಿಂಗ್ಗೆ ತೆರಳಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಅವರು ರವಿವಾರ ನಿಧನರಾದರು.
ಮೃತರು ಪತ್ನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸುನಂದಾ ರೈ, ಪುತ್ರ, ಪುತ್ರಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.