ಉಡುಪಿ, ಫೆ.21 (DaijiworldNews/MB) : ವಿದ್ಯಾರ್ಥಿಯೋರ್ವ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಮಾತ್ರವಲ್ಲದೇ ದಂಡ ಕೇಳಿದಕ್ಕೆ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಈ ಘಟನೆ ಉಡುಪಿಯ ಕಲ್ಸಂಕದಲ್ಲಿ ನಡೆದಿದೆ.

ಎಂಬಿಬಿಎಸ್ ವಿದ್ಯಾರ್ಥಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಪೊಲೀಸರು ತಪಾಸನೆ ನಡೆಸುವ ವೇಳೆ ಆತ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ವಿದ್ಯಾರ್ಥಿಯ ಬಳಿ ದಂಡ ಪಾವತಿಸಲು ಟ್ರಾಫಿಕ್ ಪೋಲಿಸರು ಹೇಳಿದ್ದು ಆದರೆ ವಿದ್ಯಾರ್ಥಿ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ.
ನನಗೆ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಪರಿಚಯ ಇದೆ ಅವರಿಂದ ನಿಮಗೆ ಪೋನ್ ಮಾಡಿಸುತ್ತೇನೆ ಎಂದು ಕೂಡಾ ವಿದ್ಯಾರ್ಥಿ ಹೇಳಿದ್ದಾನೆ.
ಪ್ರಸ್ತುತ ವಿದ್ಯಾರ್ಥಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.