ಕಾಸರಗೋಡು, ಫೆ. 21 (DaijiworldNews/SM): ಕೊರೋನಾ ತಡೆಗಟ್ಟುವಲ್ಲಿ ಕೇರಳ ಸರಕಾರ ವೈಫಲ್ಯ ಕಂಡಿದೆ. ಉತ್ತರಪ್ರದೇಶ ಸರಕಾರವನ್ನು ದೂರುತ್ತಿದ್ದ ಕೇರಳ ಈಗ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

ಅವರು ಕಾಸರಗೋಡು ತಾಲಿಪಡ್ಪು ಮೈದಾನದಲ್ಲಿ ಆದಿತ್ಯವಾರ ಸಂಜೆ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಲವ್ ಜಿಹಾದ್ ಕಾನೂನು ತರಲು ಕೇರಳ ಸರಕಾರಕ್ಕೆ ಸಾಧ್ಯವಾಗಿಲ್ಲ. ಲವ್ ಜಿಹಾದ್ ಬಗ್ಗೆ ನ್ಯಾಯಾಲಯ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದರೂ ಈ ಬಗ್ಗೆ ಗಮನ ಹರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದರು. ಕೇರಳದಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ತಡೆಗೆ ಕಾನೂನು ಜಾರಿಗೆ ತರುವ ಅಗತ್ಯ ಇದೆ. ಲವ್ ಜಿಹಾದ್ ಕಾನೂನು ತರಲು ಕೇರಳ ಸರಕಾರಕ್ಕೆ ಸಾಧ್ಯವಾಗಿಲ್ಲ. ಲವ್ ಜಿಹಾದ್ ಬಗ್ಗೆ ನ್ಯಾಯಾಲಯ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿದರೂ ಈ ಬಗ್ಗೆ ಗಮನ ಹರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸಚಿವ ವಿ. ಮುರಳೀಧರನ್ , ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಲಿರುವ ಯಾತ್ರೆ ಮಾರ್ಚ್ 7ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.