ಉಪ್ಪಳ, ಫೆ.22 (DaijiworldNews/PY): 9 ಕಿಲೋ ಗಾಂಜಾ ಸಹಿತ ಬಂದ್ಯೋಡಿನ ಯುವಕನೋರ್ವನನ್ನು ಕುಂಬಳೆ ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬಂಧಿತನನ್ನು ಬಂದ್ಯೋಡು ದೇರ್ಜಾಲಿನ ಝಕಾರಿಯ (33) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ್ದು, ಮನೆಯ ಮಂಚದಡಿಯಲ್ಲಿ ಬಚ್ಚಿಡಲಾಗಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.