ಉಡುಪಿ, ಫೆ.22 (DaijiworldNews/MB) : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಫೆಬ್ರವರಿ 22 ಸೋಮವಾರ ಆರು ದಿನಗಳ ಜನಧ್ವನಿ ಪಾದಯಾತ್ರೆಯನ್ನು ಹೆಜಮಾಡಿಯಲ್ಲಿ ಪ್ರಾರಂಭಿಸಿತು.

















ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉದ್ಘಾಟನಾ ಅಧ್ಯಕ್ಷತೆ ವಹಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡುಬಿದ್ರಿಯಲ್ಲಿ ರ್ಯಾಲಿಯನ್ನು ಉದ್ಘಾಟಿಸಿದರು.
ವಿಧಾನಸಭೆಯ ಮಾಜಿ ಸ್ಪೀಕರ್ ಪ್ರತಾಪಚಂದ್ರ ಶೆಟ್ಟಿ, ಕಾಪುವಿಮ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಮೂಡುಬಿದಿರೆಯ ಮಾಜಿ ಶಾಸಕ ಅಭಯಚಂದ್ರ ಜೈನ್, ಎಂ.ಎ. ಗಾಫೂರ್, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕೆಪಿಸಿಸಿ ಮುಖಂಡ ವೆರೋನಿಕಾ ಕಾರ್ನೆಲಿಯೊ, ಮಂಜುನಾಥ್, ದೀಪಕ್ ಕೋಟ್ಯಾನ್, ಸೌರಭ್ ಬಳ್ಳಾಲ್, ಹಬೀಬ್ ಅಲಿ ಇತರರು ಉಪಸ್ಥಿತರಿದ್ದರು.