ಮಂಗಳೂರು, ಫೆ. 22 (DaijiworldNews/SM): ನಾನು ಈವರೆಗೂ ಬೀಫ್ ತಿಂದಿಲ್ಲ. ಇನ್ನು ಮುಂದೆ ತಿನ್ನಬೇಕೆಂದು ಅನ್ನಿಸಿದರೆ ತಿನ್ನುತ್ತೇನೆ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬೀಫ್ ಎಕ್ಸ್ ಪೋರ್ಟ್ ಮಾಡುವವರು 90% ಬಿಜೆಪಿಯವರು ಅಲ್ವಾ? ವಿದೇಶದಿಂದ ತಂದ ಬೀಫ್ ತಿನ್ನಬಹುದಂತೆ, ಇಲ್ಲಿಯವರು ತಿನ್ನಬಾರದಂತೆ ಇದು ಯಾವ ನ್ಯಾಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿಯನ್ನು ಕಿತ್ತೊಗೊಯದಿದ್ದರೆ ರಾಜ್ಯದಲ್ಲಿ ಶಾಂತಿ ಇರಲ್ಲ ಎಂದಿರುವ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕೂಡ ಗುಡುಗಿದ್ದಾರೆ. ಪ್ರಧಾನಿ ಮೋದಿಗೆ ಎಷ್ಟು ಇಂಚಿನ ಎದೆ ಎಂಬುದು ಮುಖ್ಯವಲ್ಲ, ಮನುಷ್ಯನನ್ನು ಪ್ರೀತಿಸುವ ಹೃದಯ ಬೇಕು. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ..? ಎಂಬುವುದಾಗಿ ವಾಗ್ದಾಳಿ ನಡೆಸಿದ್ದಾರೆ.