ಮಂಗಳೂರು, ಫೆ. 22 (DaijiworldNews/SM): ಪ್ರಸಿದ್ಧ ಕೊಂಕಣಿ ಬರಹಗಾರ ಗ್ರೇಟಿಯನ್ ಪಿಯುಸ್ ಡಿ ಸಿಲ್ವಾ(ನಾಮ್ ಡಿ ಪ್ಲುಮ್ ಹೆರೋಲ್ಪಿಯಸ್) 67 ನೇ ವಯಸ್ಸಿನಲ್ಲಿ ಫೆಬ್ರವರಿ 22 ರ ಸೋಮವಾರ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರು ಭಾರತ ಸರ್ಕಾರದ ಕೇಂದ್ರ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದರು. ಅಲ್ಲದೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ನಿರ್ದೇಶಕರಾಗಿ ನಿವೃತ್ತರಾಗಿದ್ದರು. ಗ್ರೇಟಿಯನ್ ಪಿಯಸ್ ಅವರು 2012 ರ ಪ್ರತಿಷ್ಠಿತ 'ದೈಜಿ ದುಬೈ ಸಾಹಿತ್ಯ ಪುರೋಸ್ಕರ'ಕ್ಕೆ ಭಾಜಿನಾರಾಗಿದ್ದರು.
1954ರ ಆಗಸ್ಟ್ 14ರಂದು ಮಂಗಳೂರಿನ ಕೊರ್ಡೆಲ್ ನಲ್ಲಿ ಅವರು ಜನಿಸಿದರು. ದಿವಂಗತ ಜಾನ್ ಡಿ ಸಿಲ್ವಾ ಮತ್ತು ದಿವಂಗತ ಮಾರ್ಸೆಲಿನ್ ಫರ್ನಾಂಡಿಸ್ ದಂಪತಿಗೆ ಜನಿಸಿದ ಅವರು ಮೂವರು ಮಕ್ಕಳಲ್ಲಿ ಕಿರಿಯರಾಗಿದ್ದರು. ಅವರ ಮೊದಲ ಕಥೆಯನ್ನು 1970 ರಲ್ಲಿ ಝೆಲೊ ಮಾಸಿಕದಲ್ಲಿ ಪ್ರಕಟಿಸಿದ್ದರು. ಅದು ಸಾಹಿತ್ಯಿಕ ಯಶಸ್ಸಿನ ದಾರಿಗೆ ಅಡಿಪಾಯವಾಗಿತ್ತು.
ಇಲ್ಲಿಯವರೆಗೆ, ಅವರು ಸುಮಾರು 170 ಸಣ್ಣ ಕಥೆಗಳು, 10 ಕಾದಂಬರಿಗಳು, 272 ಲೇಖನಗಳು, 200 ಕ್ಕೂ ಹೆಚ್ಚು ಕವನಗಳು, 1200ಕ್ಕೂ ಹೆಚ್ಚು ಹಾಸ್ಯಗಳು, ಹಲವಾರು ರಂಗ ನಾಟಕಗಳು ಮತ್ತು ಸ್ಕಿಟ್ಗಳನ್ನು ಬರೆದಿದ್ದಾರೆ. ಅವರ 'ದೋನ್ ಥೆಂಬೆ ದುಖಃ' ಕಾದಂಬರಿ 1972ರಲ್ಲಿ ಗೋವಾ ಕೊಂಕಣಿ ಬಾಷಾ ಮಂಡಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರ ಜನಪ್ರಿಯ ಕಾದಂಬರಿಗಳಾದ 'ರಗತ್ ಅನಿ ಉದಕ್', 'ಏಕ್ ಅಡುರೆಮ್ ಪಿಂತೂರ್', 'ಮ್ಹಜಾ ಸಪ್ನಾಚಿ ರಾಣಿ', 'ಸಿಸ್ಟರ್ ಶೋಭಾ', 'ಮೊಗ್ ಆನಿ ತ್ಯಾಗ್ , 'ತುಮ್ ಮೊಜೆನ್ಸ್-ಭಾ', 'ಲಗ್ನಚಿಂ ಪೈಲಿ ರಾತ್', 'ಪುಸುನ್ ಘಲ್ಲೊ ಪೊಲೊ' ಮತ್ತು 'ಶಿಮ್ತಿ ಪೊಳೆ ವಾಂಕ್ಡಿ' ಓದುಗರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿವೆ.