ಬ್ರಹ್ಮಾವರ, ಫೆ.23 (DaijiworldNews/MB) : ಬಾರ್ಕೂರಿನ ಹೊಸಳ ಗ್ರಾಮದ ಮಂಜಪ್ಪ ಪೂಜಾರಿ (63) ಎಂಬವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರಿನಲ್ಲಿ ತನಗೆ ಹಾಗೂ ಇತರ ಮೂವರ ಮೇಲೆ ಫೆಬ್ರವರಿ 20 ರಂದು ಶಂಕರ್ ಶಾಂತಿ ಅವರು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ದೂರುದಾರರಾದ ಮಂಜಪ್ಪನವರು ಫೆಬ್ರವರಿ 20 ರಂದು ಬೆಳಿಗ್ಗೆ 9 ಗಂಟೆಗೆ ಅವರ ನಿವಾಸದ ಎದುರು ಇರುವ ದೇವಸ್ಥಾನದ ಸಭಾಂಗಣಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಪ್ರವೀಣ್ ಆಚಾರ್ಯ, ಪ್ರಸಾದ್ ಆಚಾರ್ಯ ಮತ್ತು ಇತರರನ್ನು ಭೇಟಿಯಾದರು ಎಂದು ಮಂಜಪ್ಪ ಹೇಳುತ್ತಾರೆ. ಇವರೊಂದಿಗೆ ಮತ್ತು ದೇವಾಲಯದಲ್ಲಿದ್ದ ರಮೇಶ್ ಅಮೀನ್ ಅವರೊಂದಿಗೆ ಪ್ರವೀಣ್ ಆಚಾರ್ಯರ ಬಳಿಗೆ ಹೋಗಿದ್ದೆ ಎಂದು ಅವರು ಹೇಳಿದ್ದು "ಆ ಸಮಯದಲ್ಲಿ, ಶಂಕರ್ ಶಾಂತಿ ಕೈಯಲ್ಲಿ ರಾಡ್ ಇಟ್ಟುಕೊಂಡು ಅಲ್ಲಿಗೆ ಬಂದು, ನಮ್ಮನ್ನು ನಿಂದಿಸಿದನು. ರಾಡ್ನ್ಲಿ ಹಲ್ಲೆ ನಡೆಸಿದನು. ನಾವು ತಪ್ಪಿಸಿಕೊಳ್ಳುವಾಗ ರಾಡ್ ಅವನ ಬಲ ಸೊಂಟದ ಮೇಲಿನ ಭಾಗಕ್ಕೆ ಬಡಿಯಿತು. ರಮೇಶ್ ಅಮೀನ್, ಪ್ರಸಾದ್ ಆಚಾರ್ಯ ಮತ್ತು ಪ್ರವೀಣ್ ಆಚಾರ್ಯರು ಜಗಳವನ್ನು ತಡೆಯಲು ಪ್ರಯತ್ನಿಸಿದರು. ಶಂಕರ್ ಶಾಂತಿ ಅವರಿಗೆ ರಾಡ್ನಲ್ಲಿ ಹಲ್ಲೆ ನಡೆಸಿದ್ದಾನೆ. ಮತ್ತು ಈ ವೇಳೆ ದೇವಾಲಯದ ಸಭಾಂಗಣದ ಕಿಟಕಿ ಗಾಜು ಚೂರುಚೂರಾಯಿತು. ನಂತರ ಆತ ನಮಗೆ ಬೆದರಿಕೆ ಹಾಕಿ ಹೊರಟನು. ಈ ದಾಳಿಯಿಂದಾಗಿ, ಮಂಜಪ್ಪ, ರಮೇಶ್, ಪ್ರಸಾದ್ ಮತ್ತು ಪ್ರವೀಣ್ ಅವರಿಗೆ ಗಾಯವಾಗಿದೆ. ಮಂಜಪ್ಪ ಅವರ ಪುತ್ರ ನಿತಿನ್ ಈ ಗಾಯಾಳುಗಳನ್ನು ಬ್ರಹ್ಮಾವರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿ ಚಿಕಿತ್ಸೆಗಾಗಿ ದಾಖಲಿಸಿಕೊಂಡಿದ್ದಾರೆ. ಪ್ರವೀಣ್ ಆಚಾರ್ಯ, ಪ್ರಸಾದ್ ಆಚಾರ್ಯ ಮತ್ತು ರಮೇಶ್ ಅಮೀನ್ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಎಂದು ತಿಳಿಸಿದ್ದಾರೆ.
ಶಂಕರ್ ಶಾಂತಿ, ಪ್ರವೀಣ್ ಆಚಾರ್ಯ ಮತ್ತು ಮಂಜಪ್ಪ ಅವರ ನಡುವೆ ದೇವಾಲಯಕ್ಕೆ ಸಂಬಂಧಿಸಿದ ಕೆಲವು ವಿವಾದಗಳಿವೆ. ಈ ದ್ವೇಷದಿಂದಾಗಿ ಈ ದಾಳಿಯನ್ನು ಪ್ರಾರಂಭಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಪ್ರತಿ ದೂರು ಕೂಡಾ ದಾಖಲಾಗಿದೆ. ಸಾಮಾನ್ಯ ಜನರು ಎದುರಿಸುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ಮತ್ತು ಕಾನೂನಿನ ನಿಯಮವನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಂಕರ್ ಶಾಂತಿ ಅವರ ಮನೆಯ ಸಮೀಪವಿರುವ ಸಭಾಂಗಣದ ಅಡುಗೆ ಮನೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಪ್ರತಿ ದೂರಿನಲ್ಲಿ ಬ್ರಹ್ಮಾವರ ಪೊಲೀಸರಿಗೆ ತಿಳಿಸಲಾಗಿದೆ. ಫೆಬ್ರವರಿ 20 ರಂದು ನಡೆದ ಹಲ್ಲೆಯಿಂದಾಗಿ ಆತ ಗಾಯಗೊಂಡು ಗೋಳಾಡುತ್ತಿದ್ದಾಗ ಆತನ ಪತ್ನಿ ಓಡಿ ಬಂದು ಪತಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಅವನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸದರು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳುತ್ತಾರೆ.
ಶಂಕರ್ ಶಾಂತಿ ಅವರು ಆರ್ಟಿಐ ಕಾರ್ಯಕರ್ತರಾಗಿದ್ದಾರೆ. ಅವರು ಗುಣಮಟ್ಟದ ಕಾಂಕ್ರೀಟ್ ರಸ್ತೆ, ಬಾರ್ಕೂರು ಜೈನ ಬಸದಿ ಭೂಮಿಯನ್ನು ಅತಿಕ್ರಮಣ ಮಾಡುವುದಕ್ಕಾಗಿ ಹೋರಾಡಿದ್ದಾರೆ. ಶಾಂತಿ ಅವರು ರಸ್ತೆಬದಿಯಲ್ಲಿ ಬ್ಯಾನರ್ ಹಾಕುವವರನ್ನು ವಿರೋಧಿಸುತ್ತಿದ್ದ ಕಾರಣ ಪ್ರವೀಣ್ ಆಚಾರ್ಯ, ಪ್ರಸಾದ್ ಆಚಾರ್ಯ, ಶಾಂತಾರಾಮ್ ಶೆಟ್ಟಿ, ಮಂಜಪ್ಪ ಪೂಜಾರಿ ಮತ್ತು ದಿವಾಕರ್ ಅವರಿಗೆ ಶಂಕರ್ ಶಾಂತಿ ಅವರು ಅಡ್ಡವಾಗಿದ್ದರು. ಆದ್ದರಿಂದ ಅವರು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ಪರಸ್ಪರ ದೂರುಗಳು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.