ಉಜಿರೆ, ಫೆ.23 (DaijiworldNews/PY): ಎಕನಾಮಿಕ್ ಸೆಲ್, ಬಿಜೆಪಿ ದ.ಕ. ಜಿಲ್ಲೆ ಮತ್ತು ಎಸ್ಡಿಎಂ ಪಿಜಿ ಸೆಂಟರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಕೇಂದ್ರ ಬಜೆಟ್ 2021 ಮತ್ತು ಭಾರತೀಯ ಆರ್ಥಿಕತೆಯ ಕುರಿತು ಎಸ್ಡಿಎಂ ಕಾಲೇಜಿನ ಆಡಿಟೋರಿಯಂನಲ್ಲಿ ಕಾರ್ಯಾಗಾರ ಜರುಗಿತು.

ಐಸಿಎಐನ ಮಂಗಳೂರು ಶಾಖೆಯ ಅಧ್ಯಕ್ಷಸಿ.ಎ ಎಸ್.ಎಸ್.ನಾಯಕ್ ಅವರು ಕೇಂದ್ರ ಬಜೆಟ್ 2021 ಹಾಗೂ ಭಾರತೀಯ ಆರ್ಥಿಕತೆಯ ಬಗ್ಗೆ ಸವಿವರವಾದ ವಿಶ್ಲೇಷಣೆ ನೀಡಿದರು.
ಕಾರ್ಯಕ್ರಮವನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಉದ್ಘಾಟಿಸಿ, "ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಭಾರತವು ಶೀಘ್ರದಲ್ಲೇ ದಾಪುಗಾಲಿಡುತ್ತದೆ" ಎಂದು ಅಭಿಪ್ರಾಯ ಪಟ್ಟರು.
ಎಕನಾಮಿಕ್ ಸೆಲ್ ಸ್ಟೇಟ್ ಬಿಜೆಪಿಯ ಕನ್ವೀನರ್ ಡಾ.ಸಮೀರ್ ಕಾಗಲ್ಕರ್ ಮುಖ್ಯ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್.ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್ಡಿಎಂ ಪಿಜಿ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿರ್ದೇಶಕಿ ಡಾ.ಸೀಮಾ ಎಸ್ ಶೆಣೈ ಅವರ ಉಪಸ್ಥಿತಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ರಮ್ಯಾ ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು. ಸಿ.ಎ ಯಶಸ್ವಿನಿ ಕೆ ಅಮೀನ್ ಅವರು ಕಾರ್ಯಕ್ರಮದ ನಿರೂಪಣೆಗೈದರು.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಅನೇಕ ಗಣ್ಯರು ಹಾಗೂ ಉದ್ಯಮಿಗಳು ಮತ್ತು ಎಸ್ಡಿಎಂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.
ಸಿ.ಎ ಎಸ್.ಎಸ್ ನಾಯಕ್ ಅವರು ಬಜೆಟ್ನ ಎಲ್ಲಾ ಆಯಾಮಗಳು ವಿಶ್ಲೇಷಿಸುತ್ತಾ, "ಭಾರತದ ಆರ್ಥಿಕತೆ ಕೊರೊನಾ ನಂತರ ಪುಟಿದೇಳುತ್ತಿದೆ ಹಾಗೂ ಕೇಂದ್ರ ಸರಕಾರದ ಬಜೆಟ್ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಹಾಗೂ ಇದು ಆರ್ಥಿಕತೆಗೆ ವ್ಯಾಕ್ಸೀನ್ ಕೊಡುವ ಬಜೆಟ್ ಆಗಿದೆ" ಎಂದು ಹೇಳಿದರು .
ದ.ಕ. ಜಿಲ್ಲಾ ಎಕನಾಮಿಕ್ ಸೆಲ್ ಬಿಜೆಪಿಯ ಕನ್ವೀನರ್ ಸಿ.ಎ ಶಾಂತಾರಾಮ್ ಶೆಟ್ಟಿ ಸ್ವಾಗತ ಭಾಷಣ ಮಾಡಿದರು, ರಾಜ್ಯ ಬಿಜೆಪಿ ಎಕನಾಮಿಕ್ ಸೆಲ್ ಸದಸ್ಯ ಚಿದಾನಂದ ಉಚ್ಚಿಲ್ ಉಪಸ್ಥಿತರಿದ್ದರು.