ಮಂಗಳೂರು, ಫೆ. 23 (DaijiworldNews/SM): ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ದಿಲ್ಲಿ ಮೂಲದ ವ್ಯಕ್ತಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ದಿಲ್ಲಿ ಹಾಗೂ ಇನ್ನೊಬ್ಬಾತ ಕಾಸರಗೋಡಿನ ನಿವಾಸಿ ಎಂದು ತಿಳಿದು ಬಂದಿದೆ. ಸ್ಕಿಮ್ಮಿಂಗ್ ಕೃತ್ಯದಲ್ಲಿ ಒಟ್ಟು 6 ಮಂದಿಯ ತಂಡದ ಕೃತ್ಯ ಶಾಮೀಲಾಗಿದ್ದು, ಕೃತ್ಯದ ಕಿಂಗ್ಪಿನ್ ಸೇರಿದಂತೆ ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ.
ಸಾರ್ವಜನಿಕರಿಂದ ಶ್ಲಾಘನೆ:
ಸ್ಕಿಮ್ಮಿಂಗ್ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರ ಬಗ್ಗೆ ಬ್ಯಾಂಕ್ ಸಿಬ್ಬಂದಿ, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಗರದಲ್ಲಿ ವ್ಯಾಪಿಸಿದ ಸ್ಕಿಮ್ಮಿಂಗ್ ಜಾಲವೊಂದನ್ನು ಬೇಧಿಸಿದಂತಾಗಿದೆ.